ನಕ್ಷತ್ರಗಳ ಅಂತರಾಳದ ರಹಸ್ಯ ತಿಳಿಯುತ್ತಾ ಬಂದಂತೆ ಅವುಗಳ ಅಗಾಧ ಗಾತ್ರದ ದ್ರವ್ಯರಾಶಿಯ ಪರಿಚಯವೂ ಆಗತೊಡಗಿತು. ನಮಗೆ ಗೊತ್ತಿರುವ ಭೌತಶಾಸ್ತ್ರದ ನಿಯಮಗಳನ್ನು ಅನ್ವಯಿಸಿ ನಕ್ಷತ್ರಗಳ ಕನಿಷ್ಠ ದ್ರವ್ಯರಾಶಿ ಎಷ್ಟಿರಬೇಕು ಎಂದು ತಿಳಿಯಬಹುದು. ಹಾಗೆಯೇ ಗರಿಷ್ಠ ಎಷ್ಟು ಎಂದು ಮೊದಲು ಲೆಕ್ಕ ಹಾಕಿದವರು ಆರ್ಥರ್ ಎಡಿಂಗ್‌ಟನ್.
ಸೌರರಾಶಿಯ ಸುಮಾರು 100 ಪಟ್ಟು ಹೆಚ್ಚು ದ್ರವ್ಯರಾಶಿಯ ನಕ್ಷತ್ರ ಇರಬಹುದು ಎಂದು ಅವರು ಸೂಚಿಸಿದರಾದರೂ 40ಪಟ್ಟು ದ್ರವ್ಯರಾಶಿಯ ನಕ್ಷತ್ರಗಳು ಮಾತ್ರ ಇದುವರೆಗೆ ಪತ್ತೆಯಾಗಿವೆ. ಹಾಗಾದರೆ ಅದಕ್ಕೂ ಹೆಚ್ಚು ಸಾಧ್ಯವಿಲ್ಲವೇ? ಈ ಪ್ರಶ್ನೆಗೆ ಉತ್ತರ ಬಹಳ ಕಾಲ ದೊರಕಿರಲಿಲ್ಲ. ಆದರೆ ಕರೀನಾ (ದೇವನೌಕೆ) ನಕ್ಷತ್ರ ಪುಂಜದ ಈಟಾ ಎಂಬ ಗ್ರೀಕ್ ಅಕ್ಷರದ ನಮೂದಿನ ನಕ್ಷತ್ರ ಸವಾಲು ಒಡ್ಡಿತು.
ಇದು ವಾಸ್ತವದಲ್ಲಿ ನಕ್ಷತ್ರವಲ್ಲ. ಒಂದು ನೆಬ್ಯುಲಾ. ಬರಿಗಣ್ಣಿಗೆ ಕಾಣುವುದು. ತ್ರಿಶಂಕು (ಕ್ರಕ್ಸ್) ಮತ್ತು ಕಿನ್ನರ (ಸೆಂಟಾರಸ್) ಈ ಎರಡು ಪುಂಜಗಳ ನಡುವೆ ಹರಡಿರುವ ಆಕಾಶಗಂಗೆಯ ಶಾಖೆಯಲ್ಲಿ ಕಾಣುತ್ತದೆ. ಸಾಕಷ್ಟು ಪ್ರಕಾಶಮಾನವಾಗಿರುವುದರಿಂದ ಬಹಳ ಸುಲಭವಾಗಿಯೇ ಗುರುತಿಸಬಹುದು.
ಇದು ನಮಗೆ (ಕರ್ನಾಟಕಕ್ಕೆ) ಕಾಣುತ್ತದೆ. ಸ್ವಲ್ಪ ಉತ್ತರಕ್ಕೆ ಹೋದರೆ ಕಾಣುವುದಿಲ್ಲ. ಈ ಕಾರಣದಿಂದಲೋ ಏನೋ ಇದು ಐರೋಪ್ಯ ಖಗೋಳಜ್ಞರ ದಾಖಲೆಗಳಲಿಲ್ಲ. ಆದರೆ ನೌಕಾಯಾನ ಆರಂಭವಾದೊಡನೆ ದಕ್ಷಿಣ ಪುಂಜಗಳ ಅದ್ಭುತ ಲೋಕ ಅವರಿಗೆ ಅನಾವರಣವಾಯಿತು. ಸಾಮಾನ್ಯವಾಗಿ ನಾವಿಕರೆಲಾ ್ಲಖಗೋಳಜ್ಞರೂ ಆಗಿರುತ್ತಿದ್ದುದರಿಂದ ಅವರು ತಮ್ಮ ಪರಿಚಯದ ವಸ್ತಗಳನ್ನೇ ದಕ್ಷಿಣದ ಪುಂಜಗಳಿಗೆ ಹೊರೊಲೊಜಿಯಂ, ಟೆಲೆಸ್ಕೋಪಿಯಂ, ಸೆಕ್ಸ್ಟೆಂಟ್ ಹೀಗೆ ಹೆಸರಿಟ್ಟರು. ಕರೀನಾಗೆ ಮೊದಲು ಆರ್ಗಸ್ ಎಂಬ ಹೆಸರಿತ್ತು (ಹಡಗಿನ ಹೆಸರು).
ಹೀಗೆ ಭಾರತಕ್ಕೆ ಬಂದ ಅನೇಕ ಐರೋಪ್ಯರು ವಿಶೇಷವಾಗಿ ದಕ್ಷಿಣದ ಪುಂಜಗಳನ್ನು ಅಭ್ಯಸಿಸಿ ವರದಿ ಮಾಡಿದರು. ಈಟಾ ಆರ್ಗಸ್ ಇದ್ದಕ್ಕಿದ್ದಂತೆ ಪ್ರಕಾಶಮಾನವಾಗಿದ್ದು 1846ರಲ್ಲಿ. ಆಗ ಬೆಂಗಳೂರಿನ ದಂಡು ಪ್ರದೇಶದಲ್ಲಿದ್ದ ಜಾನ್ ಹರ್ಷೆಲ್ (ವಿಲಿಯಂ ಹರ್ಷೆಲ್‌ನ ಮೊಮ್ಮೊಗ) ಇದನ್ನು ವೀಕ್ಷಿಸಿದ್ದು ಇದೇ ನವೆಂಬರ್ ತಿಂಗಳಿನ 22-23- 24 ಈ ದಿನಗಳಲ್ಲಿ. ತನ್ನ ಪುಟ್ಟ ದೂರದರ್ಶಕದಿಂದ ಆತ ನೆಬ್ಯುಲಾವನ್ನು ಕಂಡು ರೇಖಾ ಚಿತ್ರ ರಚಿಸಿರುವುದು ಸಹ ವರದಿಯಲ್ಲಿದೆ. ಆತ ರಾಯಲ್ ಸೊಸೈಟಿಯ ವರದಿಗಳಲ್ಲಿ ದಾಖಲಿಸಿರುವಂತೆ ಸ್ಥಳದ ಹೆಸರು ‘ಹೈ ಗ್ರೌಂಡ್ಸ್’.
ಈಗ ಬೆಂಗಳೂರಿನ ಜವಾಹರ್‌ಲಾಲ್ ನೆಹರು ತಾರಾಲಯ ಇರುವ ಪ್ರದೇಶ. ಇಲ್ಲಿ 156 ವರ್ಷಗಳ ಹಿಂದೆ ಮೊದಲ ಬಾರಿಗೆ ದೂರದರ್ಶಕದ ಬಳಕೆಯಿಂದ ವೀಕ್ಷಣೆ ನಡೆಯಿತು; ಅಷ್ಟೇ ಅಲ್ಲ ಅದರ ದಾಖಲೆ ಲಭ್ಯವಿದೆ ಎಂಬುದೇ ವಿಶೇಷ.
ಅಂದು ವರದಿಯಾದ ಸ್ಫೋಟ ದಕ್ಷಿಣ ಆಫ್ರಿಕಾದ ಕೇಪ್ ಟೌನ್‌ನಿಂದಲೂ ದಾಖಲಾಯಿತು. ಅಂದಿನಿಂದ ಇಂದಿನವರೆಗೆ ಎಲ್ಲ ಖಗೋಳಜ್ಞರ ಮತ್ತು ಹವ್ಯಾಸೀ ವೀಕ್ಷಕರಿಗೆ ಪ್ರಮುಖ ಆಕರ್ಷಣೆಯಾಗಿದೆ. ಇತ್ತೀಚಿನ ಅಧ್ಯಯನಗಳ ಪ್ರಕಾರ ಈಟಾ ಕರೀನಾ ಎಂಬುದು ನಾಲ್ಕಾರು ಭಾರೀ ದ್ರವ್ಯ ರಾಶಿಯ ಹೊಸ ನಕ್ಷತ್ರಗಳ ಉಗಮಸ್ಥಾನ. ಒಂದೊಂದೂ ಸೌರರಾಶಿಯ ನೂರು ಪಟ್ಟು ಇರಬಹುದು. ಆದ್ದರಿಂದಲೇ ಅದು 8000 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿದ್ದರೂ ಬರಿಗಣ್ಣಿಗೂ ಕಾಣುವಷ್ಟು ಪ್ರಕಾಶಮಾನವಾಗಿದೆ.
Total Pageviews
Tuesday, November 30, 2010
Friday, October 29, 2010
ವಿಜ್ಞಾನ ವಿಶೇಷ
ವಿದ್ಯುತ್ ಅಭಾವ; ರಾಜಕೀಯ ಇಚ್ಛಾಶಕ್ತಿಯ ಅಭಾವ
ಆಸ್ಟ್ರೇಲಿಯಾ ಮೂರು ವರ್ಷಗಳ ಹಿಂದೆಯೇ ಬುರುಡೆ ಬಲ್ಬ್‌ಗಳಿಗೆ ನಿಷೇಧ ಹಾಕಿದೆ. ಈಗ ಅನೇಕ ದೇಶಗಳು ಅಂಥ ಬಲ್ಬ್‌ಗಳ ಉತ್ಪಾದನೆಯನ್ನೇ ನಿಲ್ಲಿಸಿವೆ. ಅಮೆರಿಕದಲ್ಲಿ 2007ರಲ್ಲಿ ಹಳೇ ಬಲ್ಬ್ ಬದಲಿಸುವ ಒಂದು ಕ್ರಾಂತಿಯೇ ನಡೆದು ಹೋಯಿತು.
ದಸರಾ ಸ್ವಾಗತಕ್ಕೆ ನಮ್ಮಲ್ಲಿ ಸಿದ್ಧತೆ ನಡೆಯುತ್ತಿದ್ದ ಹಾಗೆ ತಮಿಳುನಾಡಿನಲ್ಲಿ ವಿಭಿನ್ನ ದೀಪೋತ್ಸವಕ್ಕೆ ಸಿದ್ಧತೆ ನಡೆದಿದೆ.
ಅಲ್ಲಿನ ಎಲ್ಲ ಸರ್ಕಾರಿ ಕಚೇರಿಗಳಲ್ಲೂ ಹಳೇ ಮಾದರಿಯ ಬುರುಡೆ ಬಲ್ಬ್‌ಗಳನ್ನು ತೆಗೆದು ಹೊಸ ‘ಸಿಎಫ್‌ಎಲ್’ಗಳನ್ನು ಹಾಕಬೇಕೆಂದು ನಿರ್ಣಯಿಸಲಾಗಿದೆ.
ಸರ್ಕಾರಿ ಕಚೇರಿಗಳಲ್ಲಷ್ಟೇ ಅಲ್ಲ, ಸರ್ಕಾರಿ ಅನುದಾನ ಪಡೆಯುವ ಸಹಕಾರಿ ಸಂಘಗಳು, ಮುನಿಸಿಪಲ್ ಮತ್ತು ಪಂಚಾಯತಗಳಂಥ ಸ್ಥಳೀಯ ಸಂಸ್ಥೆಗಳ ಕಚೇರಿಗಳಲ್ಲೂ ಸಿಎಫ್‌ಎಲ್‌ಗಳನ್ನು ಕಡ್ಡಾಯ ಮಾಡಲಾಗಿದೆ.
ಹೀಗೆ ನಾಲ್ಕು ಕೋಟಿ ಬಲ್ಬ್‌ಗಳನ್ನು ಬದಲಿಸುವುದರಿಂದ ಅಲ್ಲಿ ಒಟ್ಟು 1840 ಮೆಗಾವಾಟ್ ವಿದ್ಯುತ್ ಉಳಿತಾಯ ಸಾಧ್ಯವಾಗುತ್ತದೆಂದು ಹೇಳಲಾಗಿದೆ.
ಅದು ಭಾರಿ ಮೊತ್ತದ ಉಳಿತಾಯವೇ ಸರಿ. ಹೋಲಿಕೆಗೆ ಹೇಳುವುದಾದರೆ ನಮ್ಮ ಶರಾವತಿ ನದಿಯ (ಅದು ಈಗ ನದಿಯಾಗಿ ಉಳಿದಿಲ್ಲ, ಆ ಮಾತು ಬೇರೆ) ಎಲ್ಲ ಜನರೇಟರ್‌ಗಳಿಂದ ಉತ್ಪಾದನೆಯಾಗುವ ಒಟ್ಟೂ ವಿದ್ಯುತ್ ಶಕ್ತಿಯ ಮೊತ್ತ 1490 ಮೆಗಾವಾಟ್ ಅಷ್ಟೆ.
ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಒಂದು ಸರ್ಕಾರಿ ಆಜ್ಞೆಯ ಮೂಲಕ ತಮಿಳುನಾಡಿನವರು ಉಳಿತಾಯ ಮಾಡಿದಂತಾಯಿತು.
‘ಒಂದು ಯುನಿಟ್ ಶಕ್ತಿಯನ್ನು ಉಳಿಸಿದರೆ ಒಂದು ಯುನಿಟ್ ಉತ್ಪಾದಿಸಿದಂತೆ’ ಎಂಬ ಮಾತನ್ನು ನೆನಪಿಸಿಕೊಂಡರೆ ಅಲ್ಲಿನವರು ಯಾವ ನಿಸರ್ಗ ಸಂಪತ್ತನ್ನೂ ಮುಳುಗಿಸದೆ, ಯಾವ ನತದೃಷ್ಟರನ್ನೂ ಎತ್ತಂಗಡಿ ಮಾಡದೆ ಅಷ್ಟೊಂದು ವಿದ್ಯುತ್ ಶಕ್ತಿಯನ್ನು ಬಳಕೆಗೆ ತಂದಂತಾಯಿತು.
ಒಟ್ಟಾರೆ ಭೂಮಿಗೆ ಉಪಕಾರವನ್ನು ಮಾಡಿದಂತಾಯಿತು.ಉಪಕಾರ ಹೇಗೆಂದರೆ, ಮಾಮೂಲು ಬುರುಡೆ ಬಲ್ಬ್‌ಗಳಲ್ಲಿ ವಿದ್ಯುತ್ ಹರಿದಾಗ ಅದರ ಶೇಕಡಾ 95 ಪಾಲು ಶಾಖದ ರೂಪದಲ್ಲಿ ವ್ಯಯವಾಗುತ್ತದೆ.
ಅದು ಪಳೆಯುಳಿಕೆ ಇಂಧನದಿಂದ ಬಂದ ವಿದ್ಯುತ್ತಾಗಿದ್ದರೆ ಕಾರ್ಬನ್ ಡೈಆಕ್ಸೈಡ್ ಅನಿಲವನ್ನು ವಾತಾವರಣಕ್ಕೆ ಸೇರಿಸಿ ಭೂಮಿಯ ತಾಪಮಾನ ಹೆಚ್ಚಳವಾಗಲು ಕಾರಣವಾಗುತ್ತದೆ. ಅದರ ಬದಲಿಗೆ ಸಿಎಫ್‌ಎಲ್ -ಅಂದರೆ ಕಾಂಪಾಕ್ಟ್ ಫ್ಲೂರೋಸೆಂಟ್ ಲ್ಯಾಂಪ್‌ಗಳನ್ನು ಬಳಸಿದರೆ ಶಕ್ತಿಯ ಅಷ್ಟೊಂದು ಅಪವ್ಯಯವಾಗುವುದಿಲ್ಲ.
ಬುರುಡೆ ಬಲ್ಬ್‌ನ ಮೂರರಲ್ಲೊಂದು ಪಾಲು ವಿದ್ಯುತ್ ಶಕ್ತಿಯನ್ನು ಹೀರಿಕೊಂಡು ಸಿಎಫ್‌ಎಲ್ ಅಷ್ಟೇ ಬೆಳಕನ್ನು ನೀಡುತ್ತದೆ. ಅಂಥ ಲ್ಯಾಂಪ್‌ಗಳ ತಾಳಿಕೆಯೂ ಬುರುಡೆ ಬಲ್ಬ್‌ಗಳಿಗಿಂತ ಹತ್ತು ಪಟ್ಟು ಜಾಸ್ತಿಯೇ ಇರುತ್ತದೆ.
ಒಂದು ಬುರುಡೆ ಬಲ್ಬ್ ಬದಲು ಒಂದು ಸಿಎಫ್‌ಎಲ್ ಉರಿಸಿದರೆ ಸರಾಸರಿ 454 ಕಿಲೊಗ್ರಾಮ್ ಕಾರ್ಬನ್ ಡೈಆಕ್ಸೈಡ್ ಅನಿಲ ವಾತಾವರಣಕ್ಕೆ ಸೇರುವುದನ್ನು ತಡೆಗಟ್ಟಬಹುದು ಎಂದು ಶಕ್ತಿತಜ್ಞರು ಹೇಳುತ್ತಾರೆ.

ಒಂದು ಬಲ್ಬ್ ಬದಲಿಸಲು ಹದಿನೆಂಟು ಸೆಕೆಂಡ್ ಸಾಕಾಗಿರುವುದರಿಂದ ’18 ಸೆಕೆಂಡ್ ಚಳವಳಿ’ ಎಂಬ ಹೆಸರಿನೊಂದಿಗೆ ಸರ್ಕಾರಿ ಇಲಾಖೆಗಳು, ವಾಣಿಜ್ಯ-ಶಿಕ್ಷಣ ಸಂಸ್ಥೆಗಳು, ಮಾಧ್ಯಮಗಳು, ಮೇಯರ್‌ಗಳ ಸಂಘ, ಧಾರ್ಮಿಕ ಸಂಸ್ಥೆಗಳು, ಸಿನೆಮಾರಂಗ ಎಲ್ಲವೂ ಕೈಜೋಡಿಸಿ ಒಕ್ಕೊರಲಿನ ಪ್ರಚಾರ ನೀಡಿದ್ದರಿಂದ ಒಂದು ನಿಗದಿತ ಅವಧಿಯಲ್ಲಿ ಬಲ್ಬ್‌ಗಳೆಲ್ಲ ಬದಲಾದವು.
ಯಾವ ಪ್ರಚಾರಕ್ಕೂ ಕಿವಿಗೊಡದ ಗುಗ್ಗುಗಳಿಗೂ ಸರ್ಕಾರ ಆಮಿಷ ಒಡ್ಡಿತ್ತು: ಐದು ಬುರುಡೆ ಬಲ್ಬ್‌ಗಳನ್ನು ಕಳಚಿ ತಂದು ಕೊಟ್ಟವರಿಗೆ ಹೊಸ ಒಂದು ಸಿಎಫ್‌ಎಲ್ ನೀಡುವ ವ್ಯವಸ್ಥೆ ಮಾಡಿತ್ತು. ಇಷ್ಟಕ್ಕೂ ಅಲ್ಲಿನವರಿಗೆ ವಿದ್ಯುತ್ತಿನ ಅಭಾವವೇನೂ ಇರಲಿಲ್ಲ. ಆದರೂ ಬಿಸಿಯಾಗುತ್ತಿರುವ ಭೂಮಿಗೆ ತುಸು ತಂಪು ನೀಡಲೆಂದು ಹಮ್ಮಿಕೊಂಡ ಜನಾಂದೋಲನ ಅದಾಗಿತ್ತು.
ಹೇಗೋ ಈ ಸರಳ ತಾಂತ್ರಿಕ ಕ್ರಾಂತಿ ನಮ್ಮನ್ನು ತಟ್ಟಲೇ ಇಲ್ಲ. ವಿದ್ಯುತ್ ಅಭಾವದ ತುರ್ತು ಸಂಕಟ ಬಂದಾಗಲೆಲ್ಲ ಅಧಿಕಾರದಲ್ಲಿರುವ ನೇತಾ ಮಂದಿ ಪಕ್ಕದ ಈ ರಾಜ್ಯಕ್ಕೋ ದೂರದ ಆ ರಾಜ್ಯಕ್ಕೋ ದೌಡಾಯಿಸಿ ತುರ್ತು ಎರವಲು ತರಲು ಯತ್ನಿಸುತ್ತಾರೆಯೇ ವಿನಾ ಶಕ್ತಿ ಉಳಿತಾಯದತ್ತ ಜನರನ್ನು ಪ್ರೇರೇಪಿಸುವ ಯಾವ ಕೆಲಸವನ್ನೂ ಮಾಡುತ್ತಿಲ್ಲ.
ಸಿಎಫ್‌ಎಲ್ ಬಳಕೆಯನ್ನು ಕೊಂಡಾಡುವ ಇಲ್ಲವೇ ಪ್ರೋತ್ಸಾಹಿಸುವ ಒಂದಾದರೂ ಜಾಹೀರಾತನ್ನು ರೇಡಿಯೊ ಅಥವಾ ಟಿವಿ ಅಥವಾ ಪತ್ರಿಕೆಗಳಲ್ಲಿ ನಾವು ನೋಡಿದ್ದೇವೆಯೆ? ಸೂಕ್ತ ಮಾಹಿತಿ ನೀಡಿದರೆ ಸಿಎಫ್‌ಎಲ್‌ಗಿಂತ ಇನ್ನೂ ಜಾಸ್ತಿ ದಕ್ಷತೆಯುಳ್ಳ, ಇನ್ನೂ ದುಬಾರಿಯ ಎಲ್‌ಇಡಿ (ಲೈಟ್ ಎಮಿಟಿಂಗ್ ಡಯೋಡ್) ಲ್ಯಾಂಪ್‌ಗಳನ್ನೂ ಜನರು ಕೊಳ್ಳುತ್ತಾರೆ.
ಅಂಥ ಏನಾದರೂ ಕಾಳಜಿ ಇದ್ದಿದ್ದರೆ ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಮದ್ಯ ಹಂಚುವ ಬದಲು ಸಿಎಫ್‌ಎಲ್ ಅಥವಾ ಎಲ್‌ಇಡಿ ದೀಪಗಳನ್ನೇ ಉಚಿತ ವಿತರಣೆ ಮಾಡಬಹುದಿತ್ತು. ಹಾಗೇನಾದರೂ ಮಾಡಿದ್ದಿದ್ದರೆ ಒಂದು ಅಕ್ರಮ ಕೆಲಸದ ಮೂಲಕವೂ ಜನಕಲ್ಯಾಣ ಮತ್ತು ಲೋಕಕಲ್ಯಾಣದ ಕೆಲಸ ನಡೆದುಹೋಗುತ್ತಿತ್ತು.
ಆದರೆ ಕತ್ತಲಿನ ವ್ಯವಹಾರದಲ್ಲೇ ಭರವಸೆ ಇದ್ದವರಿಗೆ ಬೆಳಕು ಬೀರುವ ದೀಪದ ಕಡೆ ಗಮನ ಯಾಕೆ ಹೋದೀತು?
ವಿದ್ಯುತ್ತಿನ ತೀವ್ರ ಅಭಾವವಿದ್ದಾಗಲೇ ಜನಪರವಾದ ಬದಲೀ ತಂತ್ರಜ್ಞಾನವನ್ನು ಜಾರಿಗೆ ತರುವ ಕೆಲಸ ಸುಲಭವಾಗುತ್ತದೆ. ಆದರೆ ನಮ್ಮಲ್ಲಿ ಅಂಥ ಅವಕಾಶವನ್ನೂ ಜನವಿರೋಧಿ ಬೃಹತ್ ಯೋಜನೆಗಳ ಸ್ವಾಗತಕ್ಕೆಂದೇ ಬಳಸಿಕೊಳ್ಳಲಾಗುತ್ತದೆ.
ಗುಂಡ್ಯ ಜಲವಿದ್ಯುತ್ ಯೋಜನೆಯಿರಲಿ, ಸೂಪರ್ ಥರ್ಮಲ್, ಅಲ್ಟ್ರಾ ಥರ್ಮಲ್ ಇರಲಿ, ಪರಮಾಣು ಸ್ಥಾವರಗಳೇ ಇರಲಿ, ಪ್ರತಿಭಟನೆಗಳ ಇಕ್ಕಟ್ಟಿನಲ್ಲಿ ಬರಬೇಕಾದ ಯೋಜನೆಗಳು ರಾಜಮಾರ್ಗದಲ್ಲೇ ಸಾಗಿ ಬರುವಂತಾಗುತ್ತವೆ.
ಕೃತಕವೊ ಅಸಲಿಯೊ, ಅಂತೂ ಪದೇ ಪದೇ ಪವರ್ ಕಟ್‌ನಿಂದ ರೋಸಿ ಹೋಗಿರುವ ಬಹುಪಾಲು ಜನಸ್ತೋಮ ಅದೆಂಥ ಜನಮಾರಕ ಯೋಜನೆಯನ್ನೂ ಸ್ವಾಗತಿಸುವಂತಾಗುತ್ತದೆ.
ಹಾಗೆ ನೋಡಿದರೆ ನಮ್ಮಲ್ಲಿ ಬದಲೀ ಜನಪರ ಶಕ್ತಿಮೂಲಗಳಿಗೆ ಅಭಾವವೇನೂ ಇಲ್ಲ. ಅಂಥ ಹತ್ತಾರು ಪ್ರಸ್ತಾವನೆಗಳು ಎಲ್ಲೋ ಕಡತಗಳಲ್ಲಿ ಹೂತು ಕೂತಿವೆ. ಅಭಾವವೇನಿದ್ದರೂ ರಾಜಕೀಯ ಇಚ್ಛಾಶಕ್ತಿಯದೇ. ಸರ್ಕಾರದ್ದೇ ಅಂದಾಜಿನ ಪ್ರಕಾರ ಪ್ರತಿ ವರ್ಷವೂ ಸಾವಿರ ಮೆಗಾವಾಟ್‌ನಷ್ಟು ವಿದ್ಯುತ್ ಶಕ್ತಿಯನ್ನು ನವೀಕರಿಸಬಹುದಾದ ಇಂಧನ ಮೂಲಗಳಿಂದಲೇ ಪಡೆಯಲು ಸಾಧ್ಯವಿದೆ.
ಗಾಳಿಶಕ್ತಿಯಿಂದ ಸದ್ಯಕ್ಕೆ 1383 ಮೆಗಾವಾಟ್ ಸ್ಥಾಪಿತ ಸಾಮರ್ಥ್ಯವಿದೆ. ಅದನ್ನು ಹತ್ತು ಪಟ್ಟು ಹೆಚ್ಚಿಸಲು ಸಾಧ್ಯವಿದೆ. ಹದಿನೇಳು ಸಕ್ಕರೆ ಕಾರ್ಖಾನೆಗಳು ತ್ಯಾಜ್ಯ ಶಾಖದಿಂದ 535 ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದು ಇನ್ನೂ 37 ಕಾರ್ಖಾನೆಗಳ ಮನವೊಲಿಸಬೇಕಿದೆ. ಸೌರಶಕ್ತಿಗಂತೂ ಆಕಾಶವಿದ್ದಷ್ಟೂ ಅವಕಾಶವಿದೆ. ಆದರೆ ಸೌರ ವಿದ್ಯುತ್‌ಗೆ ಕೆಪಿಸಿಯ ಕೊಡುಗೆ ಇದುವರೆಗೆ ಕೇವಲ ಮೂರು ಮೆಗಾವಾಟ್ ಅಷ್ಟೆ.
ಮಾತೆತ್ತಿದರೆ ನಮ್ಮಲ್ಲಿ ‘ಸೌರಶಕ್ತಿಯ ತಂತ್ರಜ್ಞಾನ ಅಭಿವೃದ್ಧಿಯಾಗಿಲ್ಲ, ಪರಿಣತರು ಲಭ್ಯವಿಲ್ಲ’ ಎಂದೆಲ್ಲ ನೆಪಗಳು ಕೇಳಬರುತ್ತವೆ. ಆದ್ಯತೆ ನೀಡಿದರೆ ತಾನೆ ಅವೆಲ್ಲ ಲಭ್ಯವಾಗುವುದು? ಕೆಪಿಸಿಗೆ ಮೂವತ್ತು ವರ್ಷಗಳ ಹಿಂದೆ ನೇಮಕಗೊಂಡ ಎಂಜಿನಿಯರ್‌ಗಳು ಈಗಲೂ ಹಳೇಕಾಲದ ಯಂತ್ರಯುಗದಲ್ಲೇ ಇದ್ದಾರೆ.
ಅವರು ನಿಭಾಯಿಸುವ ಟರ್ಬೈನ್‌ಗಳೂ ಅಷ್ಟೇ ಹಳೇ ಕಾಲದವಾಗಿವೆ. ಅವರ ಆಸಕ್ತಿಗಳೆಲ್ಲ ಹಳೇ ಕಾಲದ ಅದೇ ಹೈಡೆಲ್, ಅದೇ ಥರ್ಮಲ್ ಯಂತ್ರಗಳ ಉಸ್ತುವಾರಿಗೆ ಮಲೆತು ನಿಂತಿವೆ.
ನಿರ್ಣಾಯಕ ಅಧಿಕಾರವೆಲ್ಲ ಅವರ ಮುಷ್ಟಿಯಲ್ಲಿದೆಯೇ ವಿನಾ ಹೊಸ ಪೀಳಿಗೆಯ ಎಂಜಿನಿಯರ್‌ಗಳಿಗೆ ಯಾವ ಆದ್ಯತೆಯೂ ಇಲ್ಲ.
ಇನ್ನು ನಾಳಿನ ಪೀಳಿಗೆಯ ಪ್ರತಿಭಾವಂತರನ್ನು ಗುರುತಿಸುವ, ಅವರಿಗೆ ಸ್ಕಾಲರ್‌ಶಿಪ್ ಕೊಟ್ಟು ಓದಿಸಿ ಮುಂಗಡ ಬುಕಿಂಗ್ ಮಾಡಿ ತನ್ನ ತೆಕ್ಕೆಗೆ ಸೇರಿಸಿಕೊಳ್ಳುವ ದೂರದರ್ಶಿತ್ವದ ಯೋಜನೆಗಳಂತೂ ದೂರದ ಮಾತು.
ಅಂಥ ಯುವ ಎಂಜಿನಿಯರ್‌ಗಳೇ ಇಂದು ಸುಧಾರಿತ ದೇಶಗಳ ಅಸಲೀ ಚಾಲನಶಕ್ತಿಯಾಗಿದ್ದಾರೆ. ಬಿಸಿಲಿನ ಶಕ್ತಿಯಿಂದ 250-300 ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದ ಕ್ಯಾಲಿಫೋರ್ನಿಯಾದಲ್ಲ ಇದೀಗ ಸಾವಿರ ಮೆಗಾವಾಟ್ ಗುರಿಯೊಂದಿಗೆ ಕೆಲಸ ಆರಂಭವಾಗಿದೆ.
ಅದು ನಮಗೆ ಪರಿಚಿತವಿರುವ ಸೌರ ಫಲಕವೂ ಅಲ್ಲ. ಅಲ್ಲಿ ಸಿಲಿಕಾನ್ ಬಿಲ್ಲೆಗಳ ಬದಲು ಬಾಣಲೆಯಂಥ ಸಾಲು ಸಾಲು ಸಂಗ್ರಾಹಕಗಳಲ್ಲಿ ಬಿಸಿಲನ್ನು ಶೇಖರಿಸಿ, ಅದರ ಶಾಖದಿಂದ ಉಗಿ ಹೊಮ್ಮುವಂತೆ ಮಾಡಿ, ಚಕ್ರ ತಿರುಗಿಸಿ ವಿದ್ಯುತ್ ಶಕ್ತಿಯನ್ನು ಪಡೆಯುತ್ತಾರೆ.
ಸಿಲಿಕಾನ್ ಬಿಲ್ಲೆಗಳಿಗೂ ಈಗ ನ್ಯಾನೊ ತಂತ್ರಜ್ಞಾನದ ಮಾಯಾಸ್ಪರ್ಶ ಸಿಕ್ಕಿದೆ. ಅವುಗಳ ದಕ್ಷತೆ ಹೆಚ್ಚಿದೆ. ಬಿಸಿಲೇ ಅಪರೂಪವೆನಿಸಿದ ಜರ್ಮನಿ, ಸ್ವೀಡನ್‌ಗಳಲ್ಲಿ ಮನೆಮನೆಗಳಲ್ಲಿ ಸೌರ ವಿದ್ಯುತ್ ಉತ್ಪಾದಿಸಿ ಗ್ರಿಡ್‌ಗೆ ಸೇರಿಸಲು ಅನುವು ಮಾಡಿಕೊಡಲಾಗುತ್ತಿದೆ.
ಇದೀಗ ಚೀನಾ ಪ್ರವಾಸ ಮುಗಿಸಿ ಬಂದ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಸಲಹೆಗಾರರಿಗೆ ಗೊತ್ತಾಗಿರಬೇಕು, ಅಮೆರಿಕವನ್ನೂ ಹಿಂದಿಕ್ಕಿ ಚೀನಾ ದೇಶ ಸೌರ ವಿದ್ಯುತ್ ಉತ್ಪಾದನೆಯಲ್ಲಿ ಮೊದಲ ಸ್ಥಾನಕ್ಕೇರಿದೆ.
ದೊಡ್ಡ ಪ್ರಮಾಣದ ಸೌರಶಕ್ತಿ ಸ್ಥಾವರ, ಗಾಳಿಶಕ್ತಿಯ ಕಂಬಸಾಲು ಇವನ್ನೆಲ್ಲ ಬಿಡಿ, ಹೂಡಿಕೆದಾರರು ಇಂದಲ್ಲ ನಾಳೆ ಹಣ ತೊಡಗಿಸಿ, ದೊಡ್ಡ ಪ್ರಮಾಣದಲ್ಲೇ ವಿದ್ಯುತ್ ಉತ್ಪಾದನೆಗೆ ತೊಡಗಬಹುದು.
‘ಜವಾಹರಲಾಲ್ ನೆಹರೂ ರಾಷ್ಟ್ರೀಯ ಸೌರಯೋಜನೆ’ ಅಡಿಯಲ್ಲಿ ಚೀನಾದಿಂದ ಸೌರಘಟಕಗಳನ್ನು ತಂದು ಸ್ಥಾಪಿಸಬಹುದು. ಅದು ಈಗಿನ ಗ್ರಿಡ್ ಜಾಲಕ್ಕೆ ಸೇರ್ಪಡೆಯಾಗಿ ಯಾವುದೋ ನಗರದ ಥಳುಕಿನ ಮಾಲ್‌ಗೊ ಅನುಕೂಲಸ್ಥರ ಉದ್ಯಮ ಘಟಕಕ್ಕೊ ಸೇರುತ್ತದೆ; ಅದರಲ್ಲೂ ಶೇಕಡಾ 30ರಷ್ಟು ತಂತಿಯಲ್ಲೇ ಸೋರುತ್ತದೆ.
ರಾಜ್ಯದ ಜನ ಸಾಮಾನ್ಯರ ಬದುಕಿನ ಬಗ್ಗೆ ನಿಜವಾದ ಕಳಕಳಿ ಇದ್ದವರು ಹಳ್ಳಿಗಳಲ್ಲಿ ‘ಗ್ರಿಡ್‌ಮುಕ್ತ’ ವಿದ್ಯುತ್ತಿನ ವ್ಯವಸ್ಥೆ ಮಾಡಬೇಕು. ಗ್ರಾಮಗಳಲ್ಲೇ ಸಿಗುವ ಕೃಷಿ ತ್ಯಾಜ್ಯ, ಜೈವಿಕ ಇಂಧನ, ನೀರಿನ ಝರಿ, ಬಿಸಿಲು, ಬೀಸುಗಾಳಿಯಂಥ ಶಕ್ತಿಮೂಲಗಳನ್ನು ದುಡಿಸಿಕೊಂಡು ಸ್ಥಳೀಯ ಮಟ್ಟದಲ್ಲೇ ಚಿಕ್ಕ, ಕಿಲೊವಾಟ್ ಸಾಮರ್ಥ್ಯದ ಘಟಕಗಳನ್ನು ಸ್ಥಾಪಿಸಿದರೆ ಉದ್ಯೋಗ ಸೃಷ್ಟಿಯಾಗುತ್ತದೆ.
ಸದ್ಯಕ್ಕೆ ನಮ್ಮ ರಾಜ್ಯದಲ್ಲಿ ಜೈವಿಕ ಇಂಧನ ಕಾರ್ಯಪಡೆಯನ್ನು ಬಿಟ್ಟರೆ ಇತರ ಶಕ್ತಿಮೂಲಗಳನ್ನು ದುಡಿಸಿಕೊಳ್ಳುವ ಕೆಲಸವೆಲ್ಲ ನಿತ್ರಾಣ ಸ್ಥಿತಿಯಲ್ಲಿವೆ.
ನಮ್ಮ ದೇಶದ ಬಹುತೇಕ ಎಲ್ಲ ಯೋಜನೆಗಳ ಹಕೀಕತ್ತು ಏನೆಂದರೆ ಅವು ಹಳ್ಳಿಗಳನ್ನು ಹಿಂದಕ್ಕಟ್ಟಿ ನಗರಗಳನ್ನು ಮುನ್ನಡೆಸುವ ನಿಟ್ಟಿನಲ್ಲೇ ಸಾಗುತ್ತವೆ. ಗ್ರಾಮೀಣ ಆರೋಗ್ಯ ಕೇಂದ್ರಗಳಿಗೆ, ಶೈತ್ಯಾಗಾರಗಳಿಗೆ, ಗೃಹ ಕೈಗಾರಿಕೆಗಳಿಗೆ ಹಾಗೂ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಇಲ್ಲದೆ ಜನ ರೋಸಿದ್ದಾರೆ.
ಆರೋಗ್ಯ ಕೇಂದ್ರಗಳ ಶೀತಲ ಪೆಟ್ಟಿಗೆಗಳಲ್ಲಿಟ್ಟ ಲಸಿಕೆಗಳು ಹಾಳಾಗಿ, ಔಷಧಗಳೂ ವಿಷವಾಗುತ್ತಿವೆ. ಗ್ರಾಮ ಮಟ್ಟದಲ್ಲೇ ವಿದ್ಯುತ್ ಉತ್ಪಾದಿಸಬಲ್ಲ ತಂತ್ರಜ್ಞಾನಕ್ಕೆ ಉತ್ತಮ ಮಾದರಿಗಳನ್ನು ಹುಡುಕಲೆಂದು ನಾವು ಬ್ರಝಿಲ್‌ಗೋ ಚೀನಾಕ್ಕೋ ಹೋಗಬೇಕಾಗಿಲ್ಲ.
ನಾಗಾಲ್ಯಾಂಡ್‌ನಲ್ಲಿ ಬಿದಿರಿನ ಒಣ ಬೊಂಬು ಮತ್ತು ಕಸಕಡ್ಡಿಗಳಿಂದಲೇ ಮೂರು ನಾಲ್ಕು ಹಳ್ಳಿಗಳಿಗೆ ಸಾಲುವಷ್ಟು ವಿದ್ಯುತ್ ಶಕ್ತಿಯನ್ನು ಪಡೆಯಲಾಗುತ್ತಿದೆ. ಪುಣೆಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನೇ ಕರಗಿಸಿ ಇಂಧನ ತೈಲವನ್ನು ಉತ್ಪಾದಿಸುವ ಕೆಲಸ ಆರಂಭವಾಗಿದೆ.
ವಿದ್ಯುತ್ ಉಳಿಸಬಲ್ಲ ನಾನಾ ಬಗೆಯ ಎಲ್‌ಇಡಿ ದೀಪಗಳನ್ನು ಉತ್ಪಾದಿಸಿದ ಬೆಂಗಳೂರಿನ ಯುವಕರು ಅವನ್ನು ಹಳ್ಳಿಗಳಿಗೆ ತಲುಪಿಸಲೆಂದು ವಿಧಾನಸೌಧಕ್ಕೆ ವರ್ಷವಿಡೀ ಅಲೆದು ಕೈಚೆಲ್ಲಿ ಕೂತಿದ್ದಾರೆ. ಕೇಳಿದರೆ, ‘ಕರ್ನಾಟಕ ವರ್ಸ್ಟ್ ಸರ್, ಸರ್ಕಾರದ ಸಹವಾಸಾನೇ ಬೇಡ’ ಎನ್ನುತ್ತಾರೆ.
ವಿಧಾನಸೌಧದಲ್ಲಿ ‘ಪವರ್’ ವ್ಯಾಖ್ಯೆ ಬೇರೆಯೇ ಇದೆ. ಅದು ಜನರನ್ನು ತಲುಪುವ ಪವರ್ ಆಗಲು ಇನ್ನೆಷ್ಟು ವರ್ಷ ಬೇಕೊ.

Saturday, October 2, 2010
ಕೊರತೆ ದುಡ್ಡಿನದಲ್ಲ, ಮಾನವೀಯತೆಯದ್ದು
ಇದಕ್ಕಿಂತ ಸಂಪೂರ್ಣ ಭಿನ್ನವಾದ ಇನ್ನೊಂದು ಲೋಕವೂ ಇದೇ ರಾಜ್ಯದಲ್ಲಿದೆ. ತಲಮಾರಿಯ ಶೆಡ್‌ನಲ್ಲಿ ಊಟ ಮಾಡುತ್ತಿದ್ದ ಮಹಿಳೆಯೊಬ್ಬರು ಕೈತಪ್ಪಿ ಕೆಳಗೆ ಬಿದ್ದ ಅನ್ನದ ಅಗುಳುಗಳನ್ನು ಮಣ್ಣಿನಿಂದ ಒಂದೊಂದಾಗಿ ಆರಿಸಿ ತಟ್ಟೆಗೆ ಸುರಿದುಕೊಳ್ಳುತ್ತಿದ್ದರು.
ಬೆಂಗಳೂರಿನ ಮಹಾತ್ಮಗಾಂಧಿ ರಸ್ತೆಯಿಂದಲೋ, ವಿಧಾನಸೌಧದ ಕಾರಿಡಾರ್‌ನಿಂದಲೋ ಯಾರಾದರೂ ನೇರವಾಗಿ ಹಾರಿ ರಾಯಚೂರಿನ ತಲಮಾರಿಗೋ,ಮಾಲ್ಕಪುರಕ್ಕೋ ಹೋಗಿ ಇಳಿದರೆ ಯಾವುದೋ ಬೇರೆ ಗ್ರಹ ಪ್ರವೇಶ ಮಾಡಿಬಿಟ್ಟೆವೇನೋ ಎಂಬ ಅನುಮಾನ ಹುಟ್ಟಿಕೊಂಡರೆ ಅಚ್ಚರಿಯೇನಿಲ್ಲ. ಕಣ್ಣು ಕುಕ್ಕುವ ಶೋರೂಮ್‌ಗಳು, ಮಬ್ಬುಗತ್ತಲಿನ ಬಾರ್-ಪಬ್ಬುಗಳು, ಥಳುಕುಬಳುಕಿನ ಗಂಡು-ಹೆಣ್ಣು ಜೋಡಿಗಳು, ಸಂಪುಟ ವಿಸ್ತರಣೆಯ ಸಂಕಟಗಳು, ಸಚಿವರ ಆತ್ಮಹತ್ಯೆ ಬೆದರಿಕೆಗಳು, ಸಚಿವರಾಗಲು ಹೊರಟವರ ಆಕ್ರಂದನ -ಆಕ್ರೋಶಗಳು, ಅವರ ಅಭಿಮಾನಿಗಳ ಉರುಳುಸೇವೆಗಳು, ಅನ್ನದ ಬದಲಿಗೆ ಭೂಮಿಯನ್ನೇ ನುಂಗುತ್ತಿರುವವರ ಹಾವಳಿಗಳು.....ಇವೆಲ್ಲ ಒಂದು ಲೋಕ.
ಇದಕ್ಕಿಂತ ಸಂಪೂರ್ಣ ಭಿನ್ನವಾದ ಇನ್ನೊಂದು ಲೋಕವೂ ಇದೇ ರಾಜ್ಯದಲ್ಲಿದೆ. ತಲಮಾರಿಯ ಶೆಡ್‌ನಲ್ಲಿ ಊಟ ಮಾಡುತ್ತಿದ್ದ ಮಹಿಳೆಯೊಬ್ಬರು ಕೈತಪ್ಪಿ ಕೆಳಗೆ ಬಿದ್ದ ಅನ್ನದ ಅಗುಳುಗಳನ್ನು ಮಣ್ಣಿನಿಂದ ಒಂದೊಂದಾಗಿ ಆರಿಸಿ ತಟ್ಟೆಗೆ ಸುರಿದುಕೊಳ್ಳುತ್ತಿದ್ದರು. ಇದನ್ನು ತಕ್ಷಣ ಶೂಟ್ ಮಾಡಲು ಮುನ್ನುಗ್ಗಿದ ರಾಯಚೂರಿನ ನಮ್ಮ ಪೋಟೋಗ್ರಾಫರ್ ಶ್ರೀನಿವಾಸ ಇನಾಮ್‌ದಾರ್ ಯಾಕೋ ಮನಸ್ಸಾಗದೆ ಕೈಸೋತವರಂತೆ ಕ್ಯಾಮೆರಾ ಕೆಳಗಿಳಿಸಿದರು. ಕೊಳಕು ನೀರು ಕುಡಿದು ಮೈಯೆಲ್ಲ ಕಜ್ಜಿ ಎದ್ದ ಮಗನ ಬಟ್ಟೆ ಬಿಚ್ಚಿ ತೋರಿಸುತ್ತಿದ್ದ ಮಾಲ್ಕಪುರದ ಮಹಿಳೆಯೊಬ್ಬರು ‘ನಮ್ ಮೈಮೇಲೂ ಅದೇರಿ..’ಎಂದಾಕ್ಷಣ ನಾನು ಮುಖ ತಿರುಗಿಸಿ ಹೊರಟುಬಂದಿದ್ದೆ. ‘ಉಣ್ಣೋದೇ ಬೇಡ ಅನಿಸಿಬಿಟ್ಟಿದೆ, ಉಂಡ್‌ಮೇಲೆ ಸಂಡಾಸ್‌ಗೆ ಹೋಗಲು ಕತ್ತಲಾಗೋ ವರೆಗೆ ಕಾಯ್‌ಬೇಕಲ್ಲಾ’ ಎಂದು ಬಿಸಿನಾಳಕೊಪ್ಪದ ಮಹಿಳೆಯೊಬ್ಬರು ಹೆಣ್ಣಿನ ಸಹಜ ಮುಜುಗರವನ್ನೂ ಬಿಟ್ಟು ಹೇಳಿಕೊಂಡಿದ್ದರು..... ಒಂದಿಷ್ಟು ಮನುಷ್ಯತ್ವ ಉಳಿಸಿಕೊಂಡಿರುವ ಯಾವುದೇ ವ್ಯಕ್ತಿಯ ಮನಸ್ಸು ಕಲಕುವ ದೃಶ್ಯಗಳು ಇವು. ಈ ಪರಿಸ್ಥಿತಿ ಇನ್ನೂ ಹಸಿಹಸಿಯಾಗಿರುವಾಗಲೇ ರಾಜ್ಯದ ಮುಖ್ಯಮಂತ್ರಿಗಳು, ಸಚಿವರು, ಹಿರಿಯ ಅಧಿಕಾರಿಗಳು ಈ ಸ್ಥಳಗಳಿಗೆ ಭೇಟಿ ನೀಡಿದ್ದರು. ಅವರಲ್ಲಿ ಯಾರ ಮನಸ್ಸನ್ನು ಇದು ಕಲಕದೆ ಹೋಯಿತೇ? ಕಲಕಿದ್ದರೆ ಹೀಗೇಕಾಗಿದೆ?
ಇವು ಒಂದೆರಡು ಕುಟುಂಬಗಳ ಕತೆ ಅಲ್ಲ, ಕೇಳುವ, ನೋಡುವ ಮನಸ್ಸಿದ್ದರೆ ಕಳೆದ ವರ್ಷ ಅತಿವೃಷ್ಟಿಗೀಡಾದ ಹದಿನಾಲ್ಕು ಜಿಲ್ಲೆಗಳಲ್ಲಿ ಇಂತಹ ಏಳು ಲಕ್ಷ ಕತೆಗಳಿವೆ. (ಸರ್ಕಾರವೇ ಲೆಕ್ಕ ಹಾಕಿರುವ ಪ್ರಕಾರ ನೆರೆಹಾವಳಿಯಿಂದಾಗಿ ಕಷ್ಟ-ನಷ್ಟಕ್ಕೆಡಾದ ಕುಟುಂಬಗಳ ಸಂಖ್ಯೆ ಏಳು ಲಕ್ಷ) ಇವರಲ್ಲಿ ಯಾರಿಗೂ ಹೊಸಮನೆಯ ಆಸರೆ ಸಿಕ್ಕಿಲ್ಲ, ಹಳೆಮನೆಗಳು ದುರಸ್ತಿಯಾಗಿಲ್ಲ. ಎಲ್ಲರೂ ಕುಸಿದುಬಿದ್ದ ಮನೆಗಳಲ್ಲಿ ಇಲ್ಲವೇ ಸರ್ಕಾರ ಕಟ್ಟಿಕೊಟ್ಟ ಕೊಟ್ಟಿಗೆಯಂತಹ ಶೆಡ್‌ಗಳಲ್ಲಿ ದಿನ ದೂಡುತ್ತಿದ್ದಾರೆ. ಈ ನಡುವೆ ಮತ್ತೆ ಮಳೆ ಹುಯ್ಯತ್ತಿದೆ. ಇದು ಬಡತನದ ಕ್ರೌರ್ಯ. ರಾಜಕೀಯದ ಕ್ರೌರ್ಯದ ಬಗ್ಗೆ ಸಚಿವ ಪದವಿ ವಂಚಿತರೊಬ್ಬರು ಅಲವತ್ತುಕೊಳ್ಳುತ್ತಿದ್ದರು. ಅವರಿಗಾಗಲಿ,ಅವರಿಗಾಗಿ ಕಣ್ಣೀರು ಸುರಿಸುತ್ತಿರುವವರಿಗಾಗಲಿ ಇದೆಲ್ಲ ಅರ್ಥವಾಗಲಾರದು.
ಕಳೆದ ವರ್ಷ ಮಳೆ ಸುರಿಯಲಾರಂಭಿಸಿ ಮನೆಗಳು ಮುಳುಗಲಾರಂಭಿಸಿದ ಕೂಡಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಮೊದಲು ಕೇಂದ್ರ ಸರ್ಕಾರದ ಜತೆಯಲ್ಲಿ ಜಗಳಕ್ಕೆ ನಿಂತದ್ದು ದುಡ್ಡಿಗಾಗಿ. ಅದರ ನಂತರ ಡಬ್ಬಿಹಿಡಿದುಕೊಂಡು ಜನರ ಬಳಿ ಹೋದರು, ಉದ್ಯಮಿಗಳನ್ನು ಬೇಡಿಕೊಂಡರು. ಇವರಲ್ಲಿ ಯಾರೂ ಇಲ್ಲ ಅನ್ನಲಿಲ್ಲ. ಶಕ್ತಿ ಮೀರಿ ಕೊಟ್ಟರು, ನಿರೀಕ್ಷೆ ಮೀರಿ ದೇಣಿಗೆ ಹರಿದುಬಂತು. ಸರ್ಕಾರ ಹಣಕ್ಕಾಗಿ ಗೋಗರೆಯುತ್ತಿರುವುದನ್ನು ನೋಡಿದಾಗ ಪರಿಹಾರ ಕಾರ್ಯಕ್ಕೆ ಹಣದ ಕೊರತೆಯೇ ಅಡ್ಡಿಯಾಗಿದೆಯೇನೋ ಎಂಬ ಸಾಮಾನ್ಯ ಭಾವನೆ ಜನರಲ್ಲಿ ಮೂಡಿತ್ತುಈಗಂತೂ ಹಣದ ಕೊರತೆ ಇಲ್ಲ, ಸರ್ಕಾರ ಕೂಡಾ ಇದನ್ನು ಹೇಳುತ್ತಿಲ್ಲ. ಹೀಗಿದ್ದರೂ ಸಂತ್ರಸ್ತರು ನೆಲೆ ಇಲ್ಲದೆ ಯಾಕೆ ನರಳಾಡುತ್ತಿದ್ದಾರೆ?
ಸಂತ್ರಸ್ತರಿಗಾಗಿ ನಿರ್ಮಾಣಗೊಳ್ಳುತ್ತಿರುವ 41,948 ಮನೆಗಳಲ್ಲಿ ಮುಕ್ಕಾಲು ಪಾಲು ಮನೆಗಳನ್ನು ಕಟ್ಟುತ್ತಿರುವವರು ದಾನಿಗಳು. ಅವುಗಳಿಗೆ ಬೇಕಾದ ಜಮೀನನ್ನಷ್ಟೇ ಸರ್ಕಾರ ನೀಡಿದೆ. ತಾತ್ಕಾಲಿಕವಾಗಿ ನಿರ್ಮಾಣಗೊಂಡಿರುವ ಶೆಡ್‌ಗಳಿಗೆ ಬೇಕಾದ ತಗಡುಶೀಟುಗಳಿಂದ ಹಿಡಿದು ಸಂತ್ರಸ್ತರಿಗೆ ಬೇಕಾದ ಆಹಾರ, ಬಟ್ಟೆಬರೆ, ಪಾತ್ರೆಪಗಡದವರೆಗೆ ಎಲ್ಲವನ್ನೂ ನೀಡಿದ್ದು ರಾಜ್ಯದ ಅನಾಮಧೇಯ ದಾನಿಗಳು. ನಿಜ ಸಂಗತಿ ಏನೆಂದರೆ ಹಣದ ಕೊರತೆ ಒಂದು ವರ್ಷದ ಹಿಂದೆಯೂ ಇರಲಿಲ್ಲ, ಈಗಲೂ ಇಲ್ಲ. ಕೊರತೆ ಮಾನವೀಯತೆ ಮತ್ತು ದೂರದೃಷ್ಟಿಯದ್ದು.
ಭಾರತದಂತಹ ದೇಶದಲ್ಲಿ ಲಿಂಗಸೂಕ್ಷ್ಮತೆ ಮತ್ತು ಜಾತಿ-ವರ್ಗ ಸೂಕ್ಷ್ಮತೆಯ ಅರಿವಿಲ್ಲದೆ ರೂಪಿಸುವ ಯೋಜನೆಗಳು ಸಫಲವಾಗುವುದು ಕಷ್ಟ. ರಾಜ್ಯ ಸರ್ಕಾರದ ನೆರೆಸಂತ್ರಸ್ತರ ಪುನರ್ವಸತಿ ಯೋಜನೆಯಲ್ಲಿಯೂ ಈ ಲೋಪಗಳೂ ಆಗಿವೆ. ಇದಕ್ಕೆ ಉತ್ತಮ ಉದಾಹರಣೆ-ತಾತ್ಕಾಲಿಕವಾಗಿ ನಿರ್ಮಿಸಲಾಗಿರುವ ಶೆಡ್‌ಗಳು. ಸರ್ಕಾರ ಸಂವೇದನಾಶೀಲವಾಗಿದ್ದರೆ, ಸ್ವಲ್ಪ ಮಾನವೀಯವಾಗಿ ಯೋಚಿಸಿದ್ದರೆ ಮನೆ ನಿರ್ಮಿಸುವಾಗಲೇ ಅದಕ್ಕೊಂದು ಸ್ನಾನದ ಮನೆ, ಹತ್ತು ಮನೆಗಳಿಗೊಂದಾದರೂ ಶೌಚಾಲಯ ಕಟ್ಟಬಹುದಿತ್ತು.. ಇದಕ್ಕಾಗಿ ಕೋಟಿ ರೂಪಾಯಿ ಖರ್ಚಾಗುತ್ತಿರಲಿಲ್ಲ.
ಸರ್ಕಾರದ ಈ ನಿರ್ಲಕ್ಷ್ಯಕ್ಕೆ ಬಲಿಯಾಗಿರುವವರು ನೆರೆಹಾವಳಿ ಪ್ರದೇಶದ ಮಹಿಳೆಯರು. ‘ಅವರು ಮೊದಲು ಕೂಡಾ ಬಯಲಿಗೆ ಹೋಗ್ತಿದ್ದರು, ಒಂದಷ್ಟು ದಿನ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ ಬಿಡಿ ’ ಎಂದು ಅಧಿಕಾರಿಗಳು ಉಡಾಫೆಯಾಗಿ ಮಾತನಾಡುತ್ತಾರೆ. ‘ಒಂದಷ್ಟು ದಿನ ಮರ್ಯಾದೆ ಬಿಟ್ಟು ಬದುಕಲಿಕ್ಕೆ ಆಗುತ್ತದ್ದೇನ್ರಿ’ ಎಂದು ಮಹಿಳೆಯರು ಕೇಳುತ್ತಾರೆ. ಆ ‘ಒಂದಷ್ಟು ದಿನಗಳ’ ಅವಧಿ ಕೂಡಾ ಈಗ ವರ್ಷವಾಗುತ್ತಿದೆ.
ಸಂತ್ರಸ್ತರಾದವರಲ್ಲಿ ಹೆಚ್ಚಿನ ಕುಟುಂಬಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು.ಹಳ್ಳಿಗಳಲ್ಲಿ ಸಾಮಾನ್ಯವಾಗಿ ಊರ ಮಧ್ಯಭಾಗದಲ್ಲಿ ಸ್ವಲ್ಪ ಎತ್ತರ ಪ್ರದೇಶದಲ್ಲಿ ಮೇಲ್ಜಾತಿ ಜನ ಮನೆಕಟ್ಟಿಕೊಂಡಿದ್ದರೆ, ಊರಿನಿಂದ ಹೊರಗೆ ತಗ್ಗುಪ್ರದೇಶದಲ್ಲಿ ಈ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕುಟುಂಬಗಳಿರುತ್ತವೆ. ಇದರಿಂದಾಗಿ ನೆರೆಹಾವಳಿಯಿಂದ ನೆಲಸಮವಾಗಿರುವ ಹೆಚ್ಚಿನ ಮನೆಗಳು ದಲಿತ ಮತ್ತು ಕೆಳಜಾತಿಗಳ ಕುಟುಂಬಗಳದ್ದು.ಪರಿಹಾರ ವಿತರಣೆ ಮತ್ತು ಹೊಸ ಮನೆಗಳ ಹಂಚಿಕೆಯಲ್ಲಿಯೂ ಹೆಚ್ಚಿನ ಅನ್ಯಾಯವಾಗಿರುವುದು ದಲಿತ ಕುಟುಂಬಗಳಿಗೆ.ದಲಿತ ಕುಟುಂಬಗಳ ಜತೆಯಲ್ಲಿ ವಾಸಿಸಲು ಮೇಲ್ಜಾತಿ ಜನ ನಿರಾಕರಿಸಿದ ಕಾರಣಕ್ಕಾಗಿಯೇ ಹಲವಾರು ಕಡೆಗಳಲ್ಲಿ ನಿವೇಶನಗಳ ಆಯ್ಕೆ ಮತ್ತು ಮನೆ ನಿರ್ಮಾಣ ವಿಳಂಬವಾಗಿವೆ.
ಜಮೀನು ಹೊಂದಿರುವ ಮೇಲ್ಜಾತಿ ಜನರದ್ದು ಇನ್ನೊಂದು ಬಗೆಯ ಗೋಳು. ಇವರ ಮನೆ ಹಳೆಯದ್ದಾಗಿರಬಹುದು, ಆದರೆ ಅವುಗಳು ಕೊಟ್ಟಿಗೆ, ಅಂಗಳ, ಬಣವೆ, ತಿಪ್ಪೆಗುಂಡಿ ಎಲ್ಲವನ್ನೂ ಒಳಗೊಂಡಿದ್ದ ವಿಶಾಲ ಮನೆ.ಗುಡಿಸಲು ಇದ್ದವರೇ ಇರಲಿ, ಹೊಲಮನೆ ಇದ್ದವರೇ ಇರಲಿ, ಎಲ್ಲರಿಗೂ 300 ಚದರ ಅಡಿಯ ಮನೆಗಳನ್ನು ಸರ್ಕಾರ ನಿರ್ಮಿಸುತ್ತಿದೆ. ಆ ಮನೆಗಳಲ್ಲಿ ರೈತರು ಹೇಗೆ ಬಾಳ್ವೆ ಮಾಡಲು ಸಾಧ್ಯ? ರೈತರ ಮೇಲೆ ಆಣೆ ಇಟ್ಟು ಅಧಿಕಾರಕ್ಕೆ ಬಂದವರಿಗೆ ಕನಿಷ್ಠ ರೈತರ ಬದುಕಿನ ಪರಿಚಯವಾದರೂ ಬೇಡವೇ?
ವಿಧಾನಸೌಧದಲ್ಲಿಯೇ ಸರ್ಕಾರ ಇಲ್ಲ ಎನ್ನುವವರಿದ್ದಾರೆ. ನೆರೆಹಾವಳಿಗೀಡಾದ ಬಳ್ಳಾರಿ, ರಾಯಚೂರು, ಬಾಗಲಕೋಟೆ,ಗದಗ ಜಿಲ್ಲೆಗಳ 35 ಊರುಗಳಲ್ಲಿ ಒಂದು ವಾರ ಕಾಲ ಸುಮಾರು 1200 ಕಿ.ಮೀ. ಸುತ್ತಿದ ನನಗೆ ಒಂದೇ ಒಂದು ಕಡೆ ಸರ್ಕಾರ ಇದೆ ಎನ್ನುವ ಸುಳಿವು ಸಿಗಲಿಲ್ಲ. ತಹಶೀಲ್ದಾರಗಳು ಬಿಡಿ, ಕನಿಷ್ಠ ಒಬ್ಬ ಜಿಲ್ಲಾ ಪಂಚಾಯತ್ ಎಂಜಿನಿಯರ್ ಇಲ್ಲವೇ ಗ್ರಾಮಲೆಕ್ಕಿಗನಾದರೂ ಕಣ್ಣಿಗೆ ಬೀಳುವುದು ಬೇಡವೇ? ಮನೆಗಳನ್ನು ಖಾಸಗಿಯವರು ನಿರ್ಮಿಸಿದರೂ ಅದರ ಗುಣಮಟ್ಟದ ಮೇಲ್ವಿಚಾರಣೆ ಸರ್ಕಾರದ್ದೇ ಆಗಿದೆ. ಇದಕ್ಕಾಗಿಯೇ ಪ್ರತಿಯೊಬ್ಬ ಜಿಲ್ಲಾಧಿಕಾರಿಗಳು ನವಗ್ರಾಮ ನಿರ್ಮಾಣವಾಗುತ್ತಿರುವ ಕಡೆಗಳಲ್ಲಿ ಜಿಲ್ಲಾ ಪಂಚಾಯತ್ ಎಂಜಿನಿಯರ್‌ಗಳನ್ನು ಮೇಲುಸ್ತುವಾರಿಗೆ ನೇಮಿಸಿದ್ದಾರೆ.
ದಾನಿಗಳು ಮನೆ ನಿರ್ಮಾಣದ ಹೊಣೆಯನ್ನು ಯಾವುದೋ ಗುತ್ತಿಗೆದಾರರಿಗೆ ಕೊಟ್ಟಿದ್ದಾರೆ. ಅವರು ಹಾಕಿದ್ದೇ ಪಾಯ, ಕಟ್ಟಿದ್ದೇ ಗೋಡೆ. ಹೇಳುವವರಿಲ್ಲ, ಕೇಳುವವರಿಲ್ಲ. ಸರ್ಕಾರದ ಪಾಲಿನ ಮನೆಗಳ ನಿರ್ಮಾಣವನ್ನು ಹೆಚ್ಚಿನ ಕಡೆ ಭೂ ಸೇನಾ ನಿಗಮಕ್ಕೆ ವಹಿಸಲಾಗಿದೆ. ಭ್ರಷ್ಟಾಚಾರ ಮತ್ತು ಕಳಪೆ ಕಾಮಗಾರಿಗಾಗಿ ಕುಖ್ಯಾತಿ ಪಡೆದಿರುವ ಈ ನಿಗಮದ ಬಗ್ಗೆ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿ ಎಂಬ ಖ್ಯಾತಿಯ ಎಸ್.ಎಂ.ಜಾಮದಾರ್ ಅವರಿಗೆ ಯಾಕೋ ಇನ್ನಿಲ್ಲದ ಪ್ರೀತಿ.ಇದನ್ನೆಲ್ಲ ಸಂತ್ರಸ್ತರು ಅಸಹಾಯಕರಾಗಿ ನೋಡುತ್ತಿದ್ದಾರೆ. ಇದಕ್ಕಾಗಿಯೇ ಅವರು ‘ಸತ್ರೆ ಇಲ್ಲೇ ಸಾಯ್ತೆವಿ, ಅಲ್ಲಿ ಹೋಗಿ ಯಾಕೆ ಸಾಯ್ಬೆಕು? ಎಂದು ಕೇಳುತ್ತಿರುವುದು.
ಪರಿಹಾರ ಹಂಚಿಕೆಯಲ್ಲಿ, ಮನೆಗಳ ನಿರ್ಮಾಣದಲ್ಲಿ, ಭೂಮಿ ಖರೀದಿಯಲ್ಲಿ ಅಕ್ರಮಗಳಾಗಿರುವ ದೂರು ವ್ಯಾಪಕವಾಗಿವೆ.ಇದರ ಅರ್ಥ ಅಕ್ರಮದ ಹಣವೆಲ್ಲ ಮುಖ್ಯಮಂತ್ರಿಗಳು ಇಲ್ಲವೇ ಸಚಿವರ ಖಾತೆಗೆ ಜಮೆ ಆಗಿದೆ ಎಂದಲ್ಲ. ಕೆಳಹಂತಗಳಲ್ಲಿಯೇ ಹೆಚ್ಚಿನ ಅಕ್ರಮಗಳು ನಡೆದಿರುವುದು. ಆದರೆ ಅವರಲ್ಲಿ ಹೆಚ್ಚಿನವರು ತಮ್ಮ ಹುದ್ದೆಗಳನ್ನು ಪಡೆದುಕೊಂಡಿರುವುದು ‘ಪೇಮೆಂಟ್ ಸೀಟು’ಗಳ ಮೂಲಕವೇ. ಆದ್ದರಿಂದ ಅವರ ಮೇಲೆ ಯಾರಿಗೂ ನಿಯಂತ್ರಣ ಇಲ್ಲ.ಹೂಡಿರುವ ಬಂಡವಾಳದ ವಸೂಲಿಗೆ ನಿಂತಿರುವ ಅವರಿಗೆ ನೆರೆ ಬಂದರೇನು, ಬರ ಬಿದ್ದರೇನು. ಎಲ್ಲವನ್ನೂ ತಮ್ಮ ಅನುಕೂಲಕ್ಕಾಗಿ ಪರಿವರ್ತಿಸಲು ಅವರಿಗೆ ಗೊತ್ತು. ‘ಒಳ್ಳೆಯ ಬರಗಾಲ ಎಂದರೆ ಎಲ್ಲರಿಗೂ ಪ್ರೀತಿ’ ಎಂದಿದ್ದರು ಖ್ಯಾತ ಪತ್ರಕರ್ತ ಪಿ. ಸಾಯಿನಾಥ್. ಒಳ್ಳೆಯ ನೆರೆ ಎಂದರೂ ಎಲ್ಲರಿಗೂ ಪ್ರೀತಿ.
‘ವಿಪತ್ತು ನಿರ್ವಹಣೆ’ಎನ್ನುವುದೇ ನಮಗೆ ಹೊಸದು. ನೆರೆ ಬಂದರೆ ಮೊದಲು ಒಂದಷ್ಟು ಗಂಜಿಕೇಂದ್ರಗಳನ್ನು ತೆರೆಯುವುದು, ನಂತರ ಒಂದಷ್ಟು ಪರಿಹಾರ ಕೊಡುವುದು, ಕೊನೆಗೊಂದಷ್ಟು ಮನೆ ಕಟ್ಟಿಕೊಡುವುದಷ್ಟೇ ವಿಪತ್ತು ನಿರ್ವಹಣೆ ಎಂದು ತಿಳಿದುಕೊಂಡವರೇ ವಿಧಾನಸೌಧದಲ್ಲಿ ಕೂತಿದ್ದಾರೆ. ಏನು ಕೇಳಿದರೂ ಅವರು ಮುಂದಿಡುವುದು ನಿರ್ಜೀವ ಅಂಕಿ ಅಂಶಗಳ ಕಂತೆಗಳನ್ನು. ವಿಪತ್ತು ನಿರ್ವಹಣೆಗೆ ಇರುವ ಬೇರೆಬೇರೆ ಆಯಾಮಗಳ ಬಗ್ಗೆ ಅವರಿಗೆ ಅರಿವಿದ್ದ ಹಾಗಿಲ್ಲ. ನೆರೆಪರಿಹಾರ ಎನ್ನುವುದು ಕೇವಲ ಕಂದಾಯ ಇಲಾಖೆಯ ಜವಾಬ್ದಾರಿ ಎಂದು ಸರ್ಕಾರ ತಿಳಿದುಕೊಂಡಿರುವುದು ಕೂಡಾ ಇದಕ್ಕೆ ಕಾರಣ. ಪುನರ್ವಸತಿ ಕಾರ್ಯದಲ್ಲಿ ಪಾಲ್ಗೊಳ್ಳಬೇಕಾಗಿರುವ ಕೃಷಿ, ಆರೋಗ್ಯ, ವಸತಿ, ನೀರಾವರಿ,ಲೋಕೋಪಯೋಗಿ, ಶಿಕ್ಷಣ, ಇಂಧನ, ಸಮಾಜಕಲ್ಯಾಣ ಹೀಗೆ ಸರ್ಕಾರದ ಬೇರೆಬೇರೆ ಇಲಾಖೆಗಳ ನಡುವೆ ಸಮನ್ವಯವೇ ಇಲ್ಲದಂತಾಗಿದೆ. ಎಲ್ಲ ಇಲಾಖೆಗಳು ಪ್ರತ್ಯೇಕ ದ್ವೀಪಗಳ ರೀತಿಯಲ್ಲಿ ಕೆಲಸ ಮಾಡುತ್ತಿವೆ. ಈ ಎಲ್ಲ ಇಲಾಖೆಗಳ ಸಚಿವರನ್ನೊಳಗೊಂಡ ತಂಡವೊಂದನ್ನು ರಚಿಸಿ ಅದಕ್ಕೆ ಪುನರ್ವಸತಿಯ ಹೊಣೆಯನ್ನು ಒಪ್ಪಿಸಿದ್ದರೆ ಈಗಿನ ಗೊಂದಲ ಇರುತ್ತಿರಲಿಲ್ಲ, ಅಕ್ರಮಗಳು ಕೂಡಾ ಕಡಿಮೆಯಾಗುತ್ತಿತ್ತು. ಕೆಲಸಗಳು ಕೂಡಾ ಬೇಗನೆ ಮುಗಿಯತ್ತಿತ್ತೋ ಏನೋ?
ಇವೆಲ್ಲಕ್ಕಿಂತಲೂ ಹೆಚ್ಚಾಗಿ ಸ್ವಾವಲಂಬಿಯಾಗಿ ಆತ್ಮಾಭಿಮಾನದಿಂದ ಬದುಕುತ್ತಿದ್ದ ಜನರನ್ನು ನೆರೆಹಾವಳಿ ಅಕ್ಷರಶಃ ಪರಾವಲಂಬಿಯಾಗಿ ಆತ್ಮಾಭಿಮಾನ ಶೂನ್ಯರನ್ನಾಗಿ ಮಾಡಿದೆ. ಸರ್ಕಾರ ಕೂಡಾ ಸಂತ್ರಸ್ತರನ್ನು ದಾನಿಗಳ ಋಣಭಾರದಲ್ಲಿ ಹಾಕಿ ಬೇಡುವವರನ್ನಾಗಿ ಮಾಡಿದೆ. ಊರ ಕಡೆಗೆ ಯಾವುದೋ ಕಾರು ಬರುತ್ತಿರುವುದನ್ನು ಕಂಡ ಕೂಡಲೇ ಮಕ್ಕಳೆಲ್ಲ ಓಡಿ ಬರುತ್ತವೆ. ತಿನ್ನಲು, ಉಣ್ಣಲು, ಉಡಲು ಏನಾದರೂ ತಂದಿರಬಹುದೇ ಎಂಬ ನಿರೀಕ್ಷೆಯಿಂದ.
ಎಷ್ಟೋ ಮನೆಗಳಲ್ಲಿ ಅಸಹಾಯಕ ಹೆತ್ತವರೇ ಮಕ್ಕಳನ್ನು ಈ ಕೆಲಸಕ್ಕೆ ಹಚ್ಚುತ್ತಿದ್ದಾರೆ. ‘ಅನ್ನ ನೀಡುತ್ತಾ ಬಂದ ಜನರನ್ನು ಈ ನೆರೆ ಮತ್ತು ಸರ್ಕಾರ ಭಿಕ್ಷುಕರನ್ನಾಗಿ ಮಾಡಿದೆ’ ಎಂದು ಕೂಡಲಸಂಗಮದಲ್ಲಿ ಭೇಟಿಯಾದ ಬಸವಜಯ ಮೃತ್ಯುಂಜಯ ಸ್ವಾಮಿಗಳು ಹೇಳುತ್ತಿದ್ದರು. ನೆರೆ ಸಂತ್ರಸ್ತರನ್ನು ನೋಡಿದಾಗ ಹಾಗೆಯೇ ಅನಿಸುತ್ತದೆ.

Monday, September 27, 2010
ಇಂಟರ್ ನೆಟ್ ಇದ್ದರಷ್ಟೇ ವ್ಯಾಪಾರಕ್ಕೆ ವ್ಯಾಪಕ ಲಾಭ
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ತ್ವರಿತವಾಗಿ ಬೆಳೆಯುತ್ತ್ತಿರುವ ತಂತ್ರಜ್ಞಾನದೊಡನೆ ನಿಮ್ಮ ವ್ಯಾಪಾರ ,ವಹಿವಾಟನ್ನು ಹೊಂದಿಸಿಕೊಳ್ಳದಿದ್ದಾರೆ. ಮಾರುಕಟ್ಟೆ ಹಳೆ ಗುಜರಿ ಅಂಗಡಿಯಂತೆ ಕಾಣುವುದಂತೂ ಖಂಡಿತ. ಆದ್ದರಿಂದ ಅನುಭವದ ಜೊತೆಗೆ ಹೊಸ ತಂತ್ರಜ್ಞಾನವನ್ನು ಸಮವಾಗಿ ಬೆರೆಸಿ ಸಂಸ್ಥೆಯನ್ನು ಮುನ್ನೆಡೆಸುವ ಅಗತ್ಯವಿದೆ.
ಸಣ್ಣ ಪ್ರಮಾಣದ ಉದ್ದಿಮೆಯಿಂದ ಹಿಡಿದು, ಮಧ್ಯಮ, ಭಾರಿ ಗಾತ್ರದ ಕೈಗಾರಿಕೆಗಳಿಗೂ ಕೂಡಾ ಇಂಟರ್ ನೆಟ್ ಸಹಾಯಕವಾಗಬಲ್ಲುದು. ಇಂಟರ್ ನೆಟ್ ಎಂಬುದು ಸಾಫ್ಟ್ ವೇರ್
ಕಂಪೆನಿಗಳ ಅಗತ್ಯತೆ ಇತರೆ ಕಂಪೆನಿಗಳಿಗೆ ಅದರ ಅವಶ್ಯಕತೆ ಇಲ್ಲ ಎಂಬ ಅಘೋಷಿತ ಮಾತು ಉದ್ದಿಮೆ ರಂಗಗಳಲ್ಲಿ ಚಾಲ್ತಿಯಲ್ಲಿದೆ. ಇದು ಸತ್ಯಕ್ಕೆ ದೂರವಾದ ಮಾತು.
ನಿಮ್ಮ ವ್ಯಾಪಾರ ವಹಿವಾಟು ವರ್ಲ್ಡ್ ವೈಡ್ ವೆಬ್ ಗೆ ಒಮ್ಮೆ ಸೇರಿದರೆ ಸಾಕು ಹಲವಾರು ಅವಕಾಶಗಳು ನಿಮ್ಮ ಕಂಪೆನಿ ಬಾಗಿಲು ತಟ್ಟಾಲಾರಂಭಿಸುತ್ತದೆ. ಮಾರ್ಕೆಟಿಂಗ್, ಜಾಹೀರಾತು, ಕಂಪೆನಿಯ ವರ್ಚಸ್ಸು ಹೆಚ್ಚಿಸುವುದಕ್ಕೆ, ಸಂವಹನ ಸಂಪರ್ಕ ಸಾಧಿಸುವುದಕ್ಕೆ, ಗ್ರಾಹಕರೊಡನೆ ಸದಾ ನೇರ ಸಂಪರ್ಕ ಹೊಂದುವುದಕ್ಕೆ ಹಾಗೂ ಕಡಿಮೆ ಅವಧಿಯಲ್ಲಿ ಉತ್ತಮ ಉತ್ಪ್ಪನ್ನಗಳನ್ನು ಹೊರ ತರುವುದಕ್ಕೆ ಇಂಟರ್ ನೆಟ್ ಸಹಕಾರಿಯಾಗಲಿದೆ.
ಇತ್ತೀಚೆಗೆ ಸಾಕಷ್ಟು ಜನಪ್ರಿಯತೆ ಗಳಿಸಿರುವ ಬ್ಲಾಗ್
ಗಳನ್ನು ಹೊಂದಿದರೆ, ವೆಬ್ ಪ್ರಪಂಚದಲ್ಲಿ ಕಾಲಿರಿಸಿದಂತೆ ಎಂಬ ಭ್ರಮೆ ಇದ್ದರೆ ಈಗಲೇ ಬದಲಾಯಿಸಿಕೊಳ್ಳಿ. ಬ್ಲಾಗ್ ಗಳು ಸರಳವಾಗಿ ಆಕರ್ಷಕವಾಗಿ ಕಂಡರೂ ಅದು ಬಾಡಿಗೆ ಮನೆ ಇದ್ದಂತ, ಸ್ವಂತ ವೆಬ್ ತಾಣ ಹೊಂದಿ, ಸ್ವಂತ ಮನೆಯಲ್ಲಿ ಇರುವ ಸುಖ ಪಡೆಯುವ ಹಂಬಲ ನಿಮ್ಮದಾಗಬೇಕು.
ಬ್ಲಾಗ್ ನಲ್ಲಿರುವ ವಿಷಯಗಳು ನಿಮ್ಮದಾದರೂ ಅದರ ಒಡೆತನ ಗೂಗಲ್ ಅಥವಾ ಇನ್ಯಾವುದೋ ಸಂಸ್ಥೆಗೆ ಸೇರಿರುತ್ತದೆ. ಗೂಗಲ್ ನ ನಿಯಮಾವಳಿಗೆ ತಕ್ಕಂತೆ ನಿಮ್ಮ ಲೇಖನಗಳು, ಚಿತ್ರಗಳು ಹಾಗೂ ಪೂರ್ತಿ ಬ್ಲಾಗ್ ಕುಣಿಯಬೇಕಾಗುತ್ತದೆ. ಅಲ್ಲದೆ, ನಿಯಮ ಮುರಿದರೆ ಇದ್ದಕ್ಕಿದ್ದಂತೆ ನಿಮ್ಮ ಬ್ಲಾಗ್ ಅನ್ನು ಶಾಶ್ವತವಾಗಿ ಕಳೆದುಕೊಳ್ಳುವ ಭಯ ಕೂಡ ಇರುತ್ತದೆ. ಇದಲ್ಲದೆ, ನಿಮ್ಮ ಅಗತ್ಯಕ್ಕೆ ಬ್ಲಾಗ್ ಅನ್ನು ವಿನ್ಯಾಸಗೊಳಿಸಿಕೊಳ್ಳಬೇಕಾದರೆ ಕೊಂಚ ಪರಿಣತಿ ಕೂಡಾ ಬೇಕು. ಇಲ್ಲದಿದ್ದರೆ ಒಂದು ಮಾಡಲು ಹೋಗಿ ಮತ್ತೊಂದು ಮಾಡಿದ ಹಾಗೆ ಆದರೆ ಕಷ್ಟ.
ಆನ್ ಲೈನ್ ನಲ್ಲಿ ನಿಮ್ಮ ಕಂಪೆನಿಗೆ ಆದ ಒಂದು ಪ್ರತ್ಯೇಕ ಸ್ಥಾನ ಸಿಗಬೇಕಾದರೆ ವಿಶಿಷ್ಟವಾದ ವೆಬ್ ತಾಣವನ್ನು ಹೊಂದುವುದು ಮುಖ್ಯ. ನಿಮ್ಮ ಸಂಸ್ಥೆಯ ಉತ್ಪನ್ನ ಹಾಗೂ ಸೇವೆಗಳ ಬಗ್ಗೆ ವೆಬ್ ಮೂಲಕ ನಿಮ್ಮ ಗ್ರಾಹಕರು, ಸ್ನೇಹಿತರು, ಕುಟುಂಬ ವರ್ಗ ಹಾಗೂ ಇನ್ನಿತರ ಸಾರ್ವಜನಿಕರು ಸುಲಭವಾಗಿ ತಿಳಿದುಕೊಳ್ಳಬಹುದು.
ವೆಬ್ ತಾಣಕ್ಕೊಂದು ಸೂಕ್ತ ಹೆಸರು:ಮೊದಲೇ ಹೇಳಿದಂತೆ ಬ್ಲಾಗ್ ನಲ್ಲಿ ಈ ಸೌಲಭ್ಯಗಳು ಸಿಗುವುದಿಲ್ಲ. ಪರಿಣತಿ ಇಲ್ಲದಿದ್ದರೆ ನಿಮ್ಮ ಬ್ಲಾಗ್ ಅನ್ನು ಉಪಯೋಗಿಸಿ ಪರಿಪೂರ್ಣ ಲಾಭ
ಗಳಿಸಲು ಸಾಧ್ಯವಿಲ್ಲ. ವೆಬ್ ತಾಣಗಳಲ್ಲಿ .in, .edu, .org, .net ಹೀಗೆ ಆಯ್ಕೆಗಳಿದ್ದರೂ ಉದ್ದಿಮೆಗಳಿಗೆ .com ಬಳಸುವುದು ಉತ್ತಮ.
ವೆಬ್ ತಾಣ ರೂಪಿಸುವ ಮೊದಲು ವೆಬ್ ತಾಣಕ್ಕೊಂದು ಸೂಕ್ತ ಹೆಸರು ಪಡೆಯಬೇಕು. ನಿಮ್ಮ ಸಂಸ್ಥೆ ಅಥವಾ ಬ್ರ್ಯಾಂಡ್ ನೇಮ್ ಹೆಸರನ್ನು ಬಳಸಿ ನೋಂದಣಿ ಮಾಡಿಕೊಳ್ಳಬಹುದು.
ನೀವು ನೋಂದಣಿ ಮಾಡಿಕೊಳ್ಳುವ ಹೆಸರು ಸರ್ಚ್ ಇಂಜಿನ್ ಗೆ ಸಿಗುವ ರೀತಿಯಲ್ಲಿದ್ದರೆ ಸೂಕ್ತ. ಹಾಗೂ ಡೊಮೈನ್ ನೇಮ್ ಆನ್ನು ಎಷ್ಟು ಕಾಲಕ್ಕಾಗಿ ಖರೀದಿಸಿದ್ದೀರಾ ಎಂಬುದು ಮುಖ್ಯ. ಕಡಿಮೆ ಅವಧಿಯ ತಾತ್ಕಾಲಿಕ ಡೊಮೆನ್ ನೇಮ್ ಪಡೆದು ಆಮೇಲೆ ಕಷ್ಟ ಪಡುವ ಬದಲು ದೀರ್ಘಾವಧಿ ಅವಧಿಗೆ ಡೊಮೈನ್ ಪಡೆಯುವುದು ಜಾಣತನ.
ಡೊಮೈ ನ್ ನೇಮ್ ನೋಂದಣಿ ಆದ ಮೇಲೆ, ಅಗತ್ಯಕ್ಕೆ ತಕ್ಕ ಹಾಗೆ ಇಮೇಲ್ ವಿಳಾಸಗಳನ್ನು ರೂಪಿಸುವುದು ಮುಖ್ಯ. ಏಕೆಂದರೆ, ನಿಮ್ಮ ಗ್ರಾಹಕರೊಡನೆ ಸಂಪರ್ಕ ವಿಳಾಸ ಇದೇ ಇ ಮೇಲ್ ಗಳ ಮೂಲಕ ಆಗುವುದು ಜಾಸ್ತಿ.
ಒಟ್ಟಿನಲ್ಲಿ ಡೊಮೈನ್ ಹೋಸ್ಟಿಂಗ್ ಮೂಲಕ ನಿಮ್ಮ ಸಂಸ್ಥೆಯ ಪ್ರಭೆಯನ್ನು ಎಲ್ಲೆಡೆ ಹರಡಬಹುದು. ಆಗಿದ್ದ್ದರೆ ಇನ್ನೇಕೆ ತಡ ಈಗಲೇ ನೋಂದಾಯಿಸಿ ಹಾಗೂ ನಿಮ್ಮ ವ್ಯಾಪಾರ ವೃದ್ಧಿಸುವ ಹೊಸ ವಿಧಾನವನ್ನು ಕಂಡುಕೊಳ್ಳಿ
ಸಣ್ಣ ಪ್ರಮಾಣದ ಉದ್ದಿಮೆಯಿಂದ ಹಿಡಿದು, ಮಧ್ಯಮ, ಭಾರಿ ಗಾತ್ರದ ಕೈಗಾರಿಕೆಗಳಿಗೂ ಕೂಡಾ ಇಂಟರ್ ನೆಟ್ ಸಹಾಯಕವಾಗಬಲ್ಲುದು. ಇಂಟರ್ ನೆಟ್ ಎಂಬುದು ಸಾಫ್ಟ್ ವೇರ್
ಕಂಪೆನಿಗಳ ಅಗತ್ಯತೆ ಇತರೆ ಕಂಪೆನಿಗಳಿಗೆ ಅದರ ಅವಶ್ಯಕತೆ ಇಲ್ಲ ಎಂಬ ಅಘೋಷಿತ ಮಾತು ಉದ್ದಿಮೆ ರಂಗಗಳಲ್ಲಿ ಚಾಲ್ತಿಯಲ್ಲಿದೆ. ಇದು ಸತ್ಯಕ್ಕೆ ದೂರವಾದ ಮಾತು. ನಿಮ್ಮ ವ್ಯಾಪಾರ ವಹಿವಾಟು ವರ್ಲ್ಡ್ ವೈಡ್ ವೆಬ್ ಗೆ ಒಮ್ಮೆ ಸೇರಿದರೆ ಸಾಕು ಹಲವಾರು ಅವಕಾಶಗಳು ನಿಮ್ಮ ಕಂಪೆನಿ ಬಾಗಿಲು ತಟ್ಟಾಲಾರಂಭಿಸುತ್ತದೆ. ಮಾರ್ಕೆಟಿಂಗ್, ಜಾಹೀರಾತು, ಕಂಪೆನಿಯ ವರ್ಚಸ್ಸು ಹೆಚ್ಚಿಸುವುದಕ್ಕೆ, ಸಂವಹನ ಸಂಪರ್ಕ ಸಾಧಿಸುವುದಕ್ಕೆ, ಗ್ರಾಹಕರೊಡನೆ ಸದಾ ನೇರ ಸಂಪರ್ಕ ಹೊಂದುವುದಕ್ಕೆ ಹಾಗೂ ಕಡಿಮೆ ಅವಧಿಯಲ್ಲಿ ಉತ್ತಮ ಉತ್ಪ್ಪನ್ನಗಳನ್ನು ಹೊರ ತರುವುದಕ್ಕೆ ಇಂಟರ್ ನೆಟ್ ಸಹಕಾರಿಯಾಗಲಿದೆ.
ಇತ್ತೀಚೆಗೆ ಸಾಕಷ್ಟು ಜನಪ್ರಿಯತೆ ಗಳಿಸಿರುವ ಬ್ಲಾಗ್
ಗಳನ್ನು ಹೊಂದಿದರೆ, ವೆಬ್ ಪ್ರಪಂಚದಲ್ಲಿ ಕಾಲಿರಿಸಿದಂತೆ ಎಂಬ ಭ್ರಮೆ ಇದ್ದರೆ ಈಗಲೇ ಬದಲಾಯಿಸಿಕೊಳ್ಳಿ. ಬ್ಲಾಗ್ ಗಳು ಸರಳವಾಗಿ ಆಕರ್ಷಕವಾಗಿ ಕಂಡರೂ ಅದು ಬಾಡಿಗೆ ಮನೆ ಇದ್ದಂತ, ಸ್ವಂತ ವೆಬ್ ತಾಣ ಹೊಂದಿ, ಸ್ವಂತ ಮನೆಯಲ್ಲಿ ಇರುವ ಸುಖ ಪಡೆಯುವ ಹಂಬಲ ನಿಮ್ಮದಾಗಬೇಕು. ಬ್ಲಾಗ್ ನಲ್ಲಿರುವ ವಿಷಯಗಳು ನಿಮ್ಮದಾದರೂ ಅದರ ಒಡೆತನ ಗೂಗಲ್ ಅಥವಾ ಇನ್ಯಾವುದೋ ಸಂಸ್ಥೆಗೆ ಸೇರಿರುತ್ತದೆ. ಗೂಗಲ್ ನ ನಿಯಮಾವಳಿಗೆ ತಕ್ಕಂತೆ ನಿಮ್ಮ ಲೇಖನಗಳು, ಚಿತ್ರಗಳು ಹಾಗೂ ಪೂರ್ತಿ ಬ್ಲಾಗ್ ಕುಣಿಯಬೇಕಾಗುತ್ತದೆ. ಅಲ್ಲದೆ, ನಿಯಮ ಮುರಿದರೆ ಇದ್ದಕ್ಕಿದ್ದಂತೆ ನಿಮ್ಮ ಬ್ಲಾಗ್ ಅನ್ನು ಶಾಶ್ವತವಾಗಿ ಕಳೆದುಕೊಳ್ಳುವ ಭಯ ಕೂಡ ಇರುತ್ತದೆ. ಇದಲ್ಲದೆ, ನಿಮ್ಮ ಅಗತ್ಯಕ್ಕೆ ಬ್ಲಾಗ್ ಅನ್ನು ವಿನ್ಯಾಸಗೊಳಿಸಿಕೊಳ್ಳಬೇಕಾದರೆ ಕೊಂಚ ಪರಿಣತಿ ಕೂಡಾ ಬೇಕು. ಇಲ್ಲದಿದ್ದರೆ ಒಂದು ಮಾಡಲು ಹೋಗಿ ಮತ್ತೊಂದು ಮಾಡಿದ ಹಾಗೆ ಆದರೆ ಕಷ್ಟ.
ಆನ್ ಲೈನ್ ನಲ್ಲಿ ನಿಮ್ಮ ಕಂಪೆನಿಗೆ ಆದ ಒಂದು ಪ್ರತ್ಯೇಕ ಸ್ಥಾನ ಸಿಗಬೇಕಾದರೆ ವಿಶಿಷ್ಟವಾದ ವೆಬ್ ತಾಣವನ್ನು ಹೊಂದುವುದು ಮುಖ್ಯ. ನಿಮ್ಮ ಸಂಸ್ಥೆಯ ಉತ್ಪನ್ನ ಹಾಗೂ ಸೇವೆಗಳ ಬಗ್ಗೆ ವೆಬ್ ಮೂಲಕ ನಿಮ್ಮ ಗ್ರಾಹಕರು, ಸ್ನೇಹಿತರು, ಕುಟುಂಬ ವರ್ಗ ಹಾಗೂ ಇನ್ನಿತರ ಸಾರ್ವಜನಿಕರು ಸುಲಭವಾಗಿ ತಿಳಿದುಕೊಳ್ಳಬಹುದು.
ವೆಬ್ ತಾಣಕ್ಕೊಂದು ಸೂಕ್ತ ಹೆಸರು:ಮೊದಲೇ ಹೇಳಿದಂತೆ ಬ್ಲಾಗ್ ನಲ್ಲಿ ಈ ಸೌಲಭ್ಯಗಳು ಸಿಗುವುದಿಲ್ಲ. ಪರಿಣತಿ ಇಲ್ಲದಿದ್ದರೆ ನಿಮ್ಮ ಬ್ಲಾಗ್ ಅನ್ನು ಉಪಯೋಗಿಸಿ ಪರಿಪೂರ್ಣ ಲಾಭ
ಗಳಿಸಲು ಸಾಧ್ಯವಿಲ್ಲ. ವೆಬ್ ತಾಣಗಳಲ್ಲಿ .in, .edu, .org, .net ಹೀಗೆ ಆಯ್ಕೆಗಳಿದ್ದರೂ ಉದ್ದಿಮೆಗಳಿಗೆ .com ಬಳಸುವುದು ಉತ್ತಮ. ವೆಬ್ ತಾಣ ರೂಪಿಸುವ ಮೊದಲು ವೆಬ್ ತಾಣಕ್ಕೊಂದು ಸೂಕ್ತ ಹೆಸರು ಪಡೆಯಬೇಕು. ನಿಮ್ಮ ಸಂಸ್ಥೆ ಅಥವಾ ಬ್ರ್ಯಾಂಡ್ ನೇಮ್ ಹೆಸರನ್ನು ಬಳಸಿ ನೋಂದಣಿ ಮಾಡಿಕೊಳ್ಳಬಹುದು.
ನೀವು ನೋಂದಣಿ ಮಾಡಿಕೊಳ್ಳುವ ಹೆಸರು ಸರ್ಚ್ ಇಂಜಿನ್ ಗೆ ಸಿಗುವ ರೀತಿಯಲ್ಲಿದ್ದರೆ ಸೂಕ್ತ. ಹಾಗೂ ಡೊಮೈನ್ ನೇಮ್ ಆನ್ನು ಎಷ್ಟು ಕಾಲಕ್ಕಾಗಿ ಖರೀದಿಸಿದ್ದೀರಾ ಎಂಬುದು ಮುಖ್ಯ. ಕಡಿಮೆ ಅವಧಿಯ ತಾತ್ಕಾಲಿಕ ಡೊಮೆನ್ ನೇಮ್ ಪಡೆದು ಆಮೇಲೆ ಕಷ್ಟ ಪಡುವ ಬದಲು ದೀರ್ಘಾವಧಿ ಅವಧಿಗೆ ಡೊಮೈನ್ ಪಡೆಯುವುದು ಜಾಣತನ.
ಡೊಮೈ ನ್ ನೇಮ್ ನೋಂದಣಿ ಆದ ಮೇಲೆ, ಅಗತ್ಯಕ್ಕೆ ತಕ್ಕ ಹಾಗೆ ಇಮೇಲ್ ವಿಳಾಸಗಳನ್ನು ರೂಪಿಸುವುದು ಮುಖ್ಯ. ಏಕೆಂದರೆ, ನಿಮ್ಮ ಗ್ರಾಹಕರೊಡನೆ ಸಂಪರ್ಕ ವಿಳಾಸ ಇದೇ ಇ ಮೇಲ್ ಗಳ ಮೂಲಕ ಆಗುವುದು ಜಾಸ್ತಿ.
Read: In English
ಇದಲ್ಲದೆ, ಸ್ವಂತದ ವೆಬ್ ತಾಣದ ಹೆಸರು ಹೊಂದಿದ ಮೇಲೆ ನಿಮಗೆ ಅಗತ್ಯ ವಿರುವಷ್ಟು ಡೊಮೈನ್ ಸ್ಪೇಸ್ ಖರೀದಿಸಬೇಕು. ನಂತರ ಸುಲಭ ರೀತಿಯಲ್ಲಿ ಅದನ್ನು ನಿಮ್ಮ ಅಗತ್ಯಕ್ಕೆ ತಕ್ಕಂತೆ ಪಳಗಿಸಿಕೊಳ್ಳಬೇಕು. ಸರಳವಾದ HTML ಪೇಜುಗಳಿಂದ ಹಿಡಿದು, ವರ್ಲ್ಡ್ ಪ್ರೆಸ್ ಮಾದರಿ CMS ಬಳಕೆಗೆ ಕೂಡಾ ಅವಕಾಶವಿರಬೇಕು. ಒಟ್ಟಿನಲ್ಲಿ ಡೊಮೈನ್ ಹೋಸ್ಟಿಂಗ್ ಮೂಲಕ ನಿಮ್ಮ ಸಂಸ್ಥೆಯ ಪ್ರಭೆಯನ್ನು ಎಲ್ಲೆಡೆ ಹರಡಬಹುದು. ಆಗಿದ್ದ್ದರೆ ಇನ್ನೇಕೆ ತಡ ಈಗಲೇ ನೋಂದಾಯಿಸಿ ಹಾಗೂ ನಿಮ್ಮ ವ್ಯಾಪಾರ ವೃದ್ಧಿಸುವ ಹೊಸ ವಿಧಾನವನ್ನು ಕಂಡುಕೊಳ್ಳಿ
Subscribe to:
Comments (Atom)