Total Pageviews

Monday, September 27, 2010

ಇಂಟರ್ ನೆಟ್ ಇದ್ದರಷ್ಟೇ ವ್ಯಾಪಾರಕ್ಕೆ ವ್ಯಾಪಕ ಲಾಭ

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ತ್ವರಿತವಾಗಿ ಬೆಳೆಯುತ್ತ್ತಿರುವ ತಂತ್ರಜ್ಞಾನದೊಡನೆ ನಿಮ್ಮ ವ್ಯಾಪಾರ ,ವಹಿವಾಟನ್ನು ಹೊಂದಿಸಿಕೊಳ್ಳದಿದ್ದಾರೆ. ಮಾರುಕಟ್ಟೆ ಹಳೆ ಗುಜರಿ ಅಂಗಡಿಯಂತೆ ಕಾಣುವುದಂತೂ ಖಂಡಿತ. ಆದ್ದರಿಂದ ಅನುಭವದ ಜೊತೆಗೆ ಹೊಸ ತಂತ್ರಜ್ಞಾನವನ್ನು ಸಮವಾಗಿ ಬೆರೆಸಿ ಸಂಸ್ಥೆಯನ್ನು ಮುನ್ನೆಡೆಸುವ ಅಗತ್ಯವಿದೆ.

ಸಣ್ಣ ಪ್ರಮಾಣದ ಉದ್ದಿಮೆಯಿಂದ ಹಿಡಿದು, ಮಧ್ಯಮ, ಭಾರಿ ಗಾತ್ರದ ಕೈಗಾರಿಕೆಗಳಿಗೂ ಕೂಡಾ ಇಂಟರ್ ನೆಟ್ ಸಹಾಯಕವಾಗಬಲ್ಲುದು. ಇಂಟರ್ ನೆಟ್ ಎಂಬುದು ಸಾಫ್ಟ್ ವೇರ್ [^] ಕಂಪೆನಿಗಳ ಅಗತ್ಯತೆ ಇತರೆ ಕಂಪೆನಿಗಳಿಗೆ ಅದರ ಅವಶ್ಯಕತೆ ಇಲ್ಲ ಎಂಬ ಅಘೋಷಿತ ಮಾತು ಉದ್ದಿಮೆ ರಂಗಗಳಲ್ಲಿ ಚಾಲ್ತಿಯಲ್ಲಿದೆ. ಇದು ಸತ್ಯಕ್ಕೆ ದೂರವಾದ ಮಾತು.

ನಿಮ್ಮ ವ್ಯಾಪಾರ ವಹಿವಾಟು ವರ್ಲ್ಡ್ ವೈಡ್ ವೆಬ್ ಗೆ ಒಮ್ಮೆ ಸೇರಿದರೆ ಸಾಕು ಹಲವಾರು ಅವಕಾಶಗಳು ನಿಮ್ಮ ಕಂಪೆನಿ ಬಾಗಿಲು ತಟ್ಟಾಲಾರಂಭಿಸುತ್ತದೆ. ಮಾರ್ಕೆಟಿಂಗ್, ಜಾಹೀರಾತು, ಕಂಪೆನಿಯ ವರ್ಚಸ್ಸು ಹೆಚ್ಚಿಸುವುದಕ್ಕೆ, ಸಂವಹನ ಸಂಪರ್ಕ ಸಾಧಿಸುವುದಕ್ಕೆ, ಗ್ರಾಹಕರೊಡನೆ ಸದಾ ನೇರ ಸಂಪರ್ಕ ಹೊಂದುವುದಕ್ಕೆ ಹಾಗೂ ಕಡಿಮೆ ಅವಧಿಯಲ್ಲಿ ಉತ್ತಮ ಉತ್ಪ್ಪನ್ನಗಳನ್ನು ಹೊರ ತರುವುದಕ್ಕೆ ಇಂಟರ್ ನೆಟ್ ಸಹಕಾರಿಯಾಗಲಿದೆ.

ಇತ್ತೀಚೆಗೆ ಸಾಕಷ್ಟು ಜನಪ್ರಿಯತೆ ಗಳಿಸಿರುವ ಬ್ಲಾಗ್ [^] ಗಳನ್ನು ಹೊಂದಿದರೆ, ವೆಬ್ ಪ್ರಪಂಚದಲ್ಲಿ ಕಾಲಿರಿಸಿದಂತೆ ಎಂಬ ಭ್ರಮೆ ಇದ್ದರೆ ಈಗಲೇ ಬದಲಾಯಿಸಿಕೊಳ್ಳಿ. ಬ್ಲಾಗ್ ಗಳು ಸರಳವಾಗಿ ಆಕರ್ಷಕವಾಗಿ ಕಂಡರೂ ಅದು ಬಾಡಿಗೆ ಮನೆ ಇದ್ದಂತ, ಸ್ವಂತ ವೆಬ್ ತಾಣ ಹೊಂದಿ, ಸ್ವಂತ ಮನೆಯಲ್ಲಿ ಇರುವ ಸುಖ ಪಡೆಯುವ ಹಂಬಲ ನಿಮ್ಮದಾಗಬೇಕು.

ಬ್ಲಾಗ್ ನಲ್ಲಿರುವ ವಿಷಯಗಳು ನಿಮ್ಮದಾದರೂ ಅದರ ಒಡೆತನ ಗೂಗಲ್ ಅಥವಾ ಇನ್ಯಾವುದೋ ಸಂಸ್ಥೆಗೆ ಸೇರಿರುತ್ತದೆ. ಗೂಗಲ್ ನ ನಿಯಮಾವಳಿಗೆ ತಕ್ಕಂತೆ ನಿಮ್ಮ ಲೇಖನಗಳು, ಚಿತ್ರಗಳು ಹಾಗೂ ಪೂರ್ತಿ ಬ್ಲಾಗ್ ಕುಣಿಯಬೇಕಾಗುತ್ತದೆ. ಅಲ್ಲದೆ, ನಿಯಮ ಮುರಿದರೆ ಇದ್ದಕ್ಕಿದ್ದಂತೆ ನಿಮ್ಮ ಬ್ಲಾಗ್ ಅನ್ನು ಶಾಶ್ವತವಾಗಿ ಕಳೆದುಕೊಳ್ಳುವ ಭಯ ಕೂಡ ಇರುತ್ತದೆ. ಇದಲ್ಲದೆ, ನಿಮ್ಮ ಅಗತ್ಯಕ್ಕೆ ಬ್ಲಾಗ್ ಅನ್ನು ವಿನ್ಯಾಸಗೊಳಿಸಿಕೊಳ್ಳಬೇಕಾದರೆ ಕೊಂಚ ಪರಿಣತಿ ಕೂಡಾ ಬೇಕು. ಇಲ್ಲದಿದ್ದರೆ ಒಂದು ಮಾಡಲು ಹೋಗಿ ಮತ್ತೊಂದು ಮಾಡಿದ ಹಾಗೆ ಆದರೆ ಕಷ್ಟ.

ಆನ್ ಲೈನ್ ನಲ್ಲಿ ನಿಮ್ಮ ಕಂಪೆನಿಗೆ ಆದ ಒಂದು ಪ್ರತ್ಯೇಕ ಸ್ಥಾನ ಸಿಗಬೇಕಾದರೆ ವಿಶಿಷ್ಟವಾದ ವೆಬ್ ತಾಣವನ್ನು ಹೊಂದುವುದು ಮುಖ್ಯ. ನಿಮ್ಮ ಸಂಸ್ಥೆಯ ಉತ್ಪನ್ನ ಹಾಗೂ ಸೇವೆಗಳ ಬಗ್ಗೆ ವೆಬ್ ಮೂಲಕ ನಿಮ್ಮ ಗ್ರಾಹಕರು, ಸ್ನೇಹಿತರು, ಕುಟುಂಬ ವರ್ಗ ಹಾಗೂ ಇನ್ನಿತರ ಸಾರ್ವಜನಿಕರು ಸುಲಭವಾಗಿ ತಿಳಿದುಕೊಳ್ಳಬಹುದು.

ವೆಬ್ ತಾಣಕ್ಕೊಂದು ಸೂಕ್ತ ಹೆಸರು:
ಮೊದಲೇ ಹೇಳಿದಂತೆ ಬ್ಲಾಗ್ ನಲ್ಲಿ ಈ ಸೌಲಭ್ಯಗಳು ಸಿಗುವುದಿಲ್ಲ. ಪರಿಣತಿ ಇಲ್ಲದಿದ್ದರೆ ನಿಮ್ಮ ಬ್ಲಾಗ್ ಅನ್ನು ಉಪಯೋಗಿಸಿ ಪರಿಪೂರ್ಣ ಲಾಭ [^] ಗಳಿಸಲು ಸಾಧ್ಯವಿಲ್ಲ. ವೆಬ್ ತಾಣಗಳಲ್ಲಿ .in, .edu, .org, .net ಹೀಗೆ ಆಯ್ಕೆಗಳಿದ್ದರೂ ಉದ್ದಿಮೆಗಳಿಗೆ .com ಬಳಸುವುದು ಉತ್ತಮ.

ವೆಬ್ ತಾಣ ರೂಪಿಸುವ ಮೊದಲು ವೆಬ್ ತಾಣಕ್ಕೊಂದು ಸೂಕ್ತ ಹೆಸರು ಪಡೆಯಬೇಕು. ನಿಮ್ಮ ಸಂಸ್ಥೆ ಅಥವಾ ಬ್ರ್ಯಾಂಡ್ ನೇಮ್ ಹೆಸರನ್ನು ಬಳಸಿ ನೋಂದಣಿ ಮಾಡಿಕೊಳ್ಳಬಹುದು.

ನೀವು ನೋಂದಣಿ ಮಾಡಿಕೊಳ್ಳುವ ಹೆಸರು ಸರ್ಚ್ ಇಂಜಿನ್ ಗೆ ಸಿಗುವ ರೀತಿಯಲ್ಲಿದ್ದರೆ ಸೂಕ್ತ. ಹಾಗೂ ಡೊಮೈನ್ ನೇಮ್ ಆನ್ನು ಎಷ್ಟು ಕಾಲಕ್ಕಾಗಿ ಖರೀದಿಸಿದ್ದೀರಾ ಎಂಬುದು ಮುಖ್ಯ. ಕಡಿಮೆ ಅವಧಿಯ ತಾತ್ಕಾಲಿಕ ಡೊಮೆನ್ ನೇಮ್ ಪಡೆದು ಆಮೇಲೆ ಕಷ್ಟ ಪಡುವ ಬದಲು ದೀರ್ಘಾವಧಿ ಅವಧಿಗೆ ಡೊಮೈನ್ ಪಡೆಯುವುದು ಜಾಣತನ.

ಡೊಮೈ ನ್ ನೇಮ್ ನೋಂದಣಿ ಆದ ಮೇಲೆ, ಅಗತ್ಯಕ್ಕೆ ತಕ್ಕ ಹಾಗೆ ಇಮೇಲ್ ವಿಳಾಸಗಳನ್ನು ರೂಪಿಸುವುದು ಮುಖ್ಯ. ಏಕೆಂದರೆ, ನಿಮ್ಮ ಗ್ರಾಹಕರೊಡನೆ ಸಂಪರ್ಕ ವಿಳಾಸ ಇದೇ ಇ ಮೇಲ್ ಗಳ ಮೂಲಕ ಆಗುವುದು ಜಾಸ್ತಿ.
  Read:  In English 
ಇದಲ್ಲದೆ, ಸ್ವಂತದ ವೆಬ್ ತಾಣದ ಹೆಸರು ಹೊಂದಿದ ಮೇಲೆ ನಿಮಗೆ ಅಗತ್ಯ ವಿರುವಷ್ಟು ಡೊಮೈನ್ ಸ್ಪೇಸ್ ಖರೀದಿಸಬೇಕು. ನಂತರ ಸುಲಭ ರೀತಿಯಲ್ಲಿ ಅದನ್ನು ನಿಮ್ಮ ಅಗತ್ಯಕ್ಕೆ ತಕ್ಕಂತೆ ಪಳಗಿಸಿಕೊಳ್ಳಬೇಕು. ಸರಳವಾದ HTML ಪೇಜುಗಳಿಂದ ಹಿಡಿದು, ವರ್ಲ್ಡ್ ಪ್ರೆಸ್ ಮಾದರಿ CMS ಬಳಕೆಗೆ ಕೂಡಾ ಅವಕಾಶವಿರಬೇಕು.

ಒಟ್ಟಿನಲ್ಲಿ ಡೊಮೈನ್ ಹೋಸ್ಟಿಂಗ್ ಮೂಲಕ ನಿಮ್ಮ ಸಂಸ್ಥೆಯ ಪ್ರಭೆಯನ್ನು ಎಲ್ಲೆಡೆ ಹರಡಬಹುದು. ಆಗಿದ್ದ್ದರೆ ಇನ್ನೇಕೆ ತಡ ಈಗಲೇ ನೋಂದಾಯಿಸಿ ಹಾಗೂ ನಿಮ್ಮ ವ್ಯಾಪಾರ ವೃದ್ಧಿಸುವ ಹೊಸ ವಿಧಾನವನ್ನು ಕಂಡುಕೊಳ್ಳಿ

No comments:

Post a Comment